ಸರ್ಕಾರದಿಂದ ಎಲ್ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ
ನವದೆಹಲಿ, ಮಾರ್ಚ್ 15: ಸರ್ಕಾರವು ಎಲ್ಪಿಜಿ ಪೂರೈಕೆಯಲ್ಲಿ ತೊಂದರೆ ಆಗಿಲ್ಲ ಎಂದು ಹೇಳುತ್ತಿದ್ದರೂ ಗ್ಯಾಸ್ ಸಿಲಿಂಡರ್ (LPG cylinder) ಸಿಗುವುದು ತಡವಾಗುತ್ತಿರುವುದು ಹೌದು. ಜನರೂ ಕೂಡ ಎಂದಿಗಿಂತ ಹೆಚ್ಚು ಬೇಗ ಎಲ್ಪಿಜಿ ಗ್ಯಾಸ್ ಬುಕಿಂಗ್ ಮಾಡುತ್ತಿರುವುದೂ ಹೌದು. ಇದೇ ವೇಳೆ, ಎಲ್ಪಿಜಿ ಪೂರೈಕೆ ಮತ್ತು ವಿತರಣೆ ನಿಯಂತ್ರಣ ಆದೇಶದಲ್ಲಿ (LPG supply and distribution order) ಸರ್ಕಾರ ಬದಲಾವಣೆ ಮಾಡಿದೆ. ಪೈಪ್ಡ್ ಗ್ಯಾಸ್ ಅಥವಾ ಪಿಎನ್ಜಿ (PNG- Piped Natural Gas) ಸೌಲಭ್ಯ ಹೊಂದಿರುವ ಜನರಿಗೆ ಎಲ್ಪಿಜಿ…