Headlines

ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿಸಿದ ಬ್ಯಾಂಕ್: ಹೇಗೆ ಗೊತ್ತಾ?

ಹಾಸನ, (ಮಾರ್ಚ್ 14): ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ರೈತನಿಗೆ ಕೆನರಾ ಬ್ಯಾಂಕ್ (Sakleshpura canara bank) ನೀಡಬೇಕಿದ್ದ 66 ಪೈಸೆ ಹಣವನ್ನು ಕೊನೆಗೂ ಮರುಪಾವತಿಸಿದೆ. ಕೆಲವು ವರ್ಷಗಳ ಹಿಂದೆ ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ 50 ಸಾವಿರ ರೂ. ಸಾಲವನ್ನು (Loan)  ಕೆನರಾ ಬ್ಯಾಂಕ್‌ನಲ್ಲಿ ಪಡೆದಿದ್ದರು. ಸಕಾಲಕ್ಕೆ ಸಾಲ ತೀರುವಳಿ ಮಾಡಿದ್ದ ರೈತನಿಗೆ ಕೆಲವು ದಿನಗಳ ನಂತರ ಇನ್ನೂ 9.34 ಪೈಸೆ ಸಾಲ ಬಾಕಿ ಇದ್ದು ತಕ್ಷಣವೇ ಮರುಪಾವತಿಸುವಂತೆ ನೋಟಿಸ್‌ ನೀಡಿದ್ದಲ್ಲದೆ ಪದೇಪದೆ ಕರೆ ಮಾಡುತ್ತಿದ್ದರು….

Read More

ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ; ಲಕ್ಷಾಂತರ ರೂ. ಮೌಲ್ಯದ ಮೊಟ್ಟೆಗಳು ಮಣ್ಣುಪಾಲು!

ಬೆಂಗಳೂರು, ಮಾರ್ಚ್​ 14: ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಸಿಲಿಂಡರ್ (LPG Gas Cylinder)ಕೊರತೆ ಜೊತೆಗೆ ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮದ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ. ಯಾದಗಿರಿ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ಮೊಟ್ಟೆಗಳ ವ್ಯಾಪಾರ ಬಹುತೇಕ ಸ್ಥಗಿತಗೊಂಡಿದ್ದು, ಇದರಿಂದ ಕೋಳಿ ಫಾರ್ಮ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾವೇರಿಯ ಮೊಟ್ಟೆ ವ್ಯಾಪಾರದಲ್ಲಿ ಭಾರೀ ನಷ್ಟ ಹಾವೇರಿಯಲ್ಲಿ ಪ್ರತಿದಿನ ಭಾರತದಿಂದ ಸುಮಾರು 80 ಲಕ್ಷ ಮೊಟ್ಟೆಗಳು ವಿದೇಶಗಳಿಗೆ ರಫ್ತು ಆಗುತ್ತಿದ್ದವು….

Read More

ಪ್ರಧಾನಿ ಮೋದಿ ನಿರಂತರ ಪ್ರಯತ್ನದ ಬಳಿಕ ಅಂತೂ ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಎರಡು ಹಡಗುಗಳು

ನವದೆಹಲಿ, ಮಾರ್ಚ್​ 14: ಭಾರತದ ಧ್ವಜ ಹೊತ್ತ ಎರಡು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SCI) LPG ಟ್ಯಾಂಕರ್‌ಗಳು ಇಂದು ಹಾರ್ಮುಜ್(Hormuz) ಜಲಸಂಧಿಯನ್ನು ದಾಟಿ ಭಾರತದ ಕಡೆಗೆ ಸಾಗುತ್ತಿವೆ. ಹಡಗುಗಳ ಹೆಸರುಗಳು ಶಿವಾಲಿಕ್ ಮತ್ತು ನಂದಾ ದೇವಿ. ಇರಾನ್ ಮತ್ತು ಆ ಪ್ರದೇಶದ ಇತರ ಎಲ್ಲಾ ದೇಶಗಳ ಸಹಕಾರದೊಂದಿಗೆ ಇದು ಬಹಳ ಎಚ್ಚರಿಕೆಯಿಂದ ನಡೆಸಲಾದ ಕಾರ್ಯಾಚರಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಇರಾನಿನ ನಾಯಕತ್ವಗಳ ನಡುವಿನ ಸರಣಿ ಮಾತುಕತೆ ನಂತರ ಈ…

Read More

‘ಯಶ್ ಖಿನ್ನತೆಗೆ ಒಳಗಾಗಿದ್ದಾನೆ’; ವಿವಾದಿತ ಹೇಳಿಕೆ ನೀಡಿದ ಜ್ಯೋತಿಷಿ ವೇಣು ಸ್ವಾಮಿ

ಜ್ಯೋತಿಷಿ ವೇಣು ಸ್ವಾಮಿ ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರ ಕಣ್ಣು ಯಶ್ ಮೇಲೆ ಬಿದ್ದಿದೆ. ಯಶ್ ಅವರನ್ನು ಏಕವಚನದಲ್ಲಿ ಕರೆದಿದ್ದು ಅಲ್ಲದೆ, ಅವರು ಖಿನ್ನೆತಗೆ ಒಳಗಾಗಿದ್ದಾರೆ ಎಂದಿದ್ದಾರೆ. ಇದು ಎರಡು ತಿಂಗಳ ಹಿಂದೆ ನೀಡಿದ ಸಂದರ್ಶನ ಆಗಿದ್ದು, ಈಗ ವೈರಲ್ ಆಗಿದೆ. ಯಶ್ ಬಗ್ಗೆ ಈ ರೀತಿ ಮಾತನಾಡಿದ ವೇಣು ಸ್ವಾಮಿ ವಿರದ್ಧ ಯಶ್ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ. ವೇಣು ಸ್ವಾಮಿ ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಸುದ್ದಿ ಆಗುತ್ತಾರೆ….

Read More

ಧಾರವಾಡದ ಕೇಂದ್ರ ಕಾರಾಗೃಹ ಕೈದಿಗಳ ಪಾಲಿಗೆ ಪಂಚತಾರಾ ಹೋಟೆಲ್: ಹಣ ಕೊಟ್ಟರೆ ಎಲ್ಲ ಸಿಗುತ್ತದೆ, ಆಡಿಯೋ ವೈರಲ್

ಧಾರವಾಡ, ಮಾ.14: ಜೈಲುಗಳು ಅಂದರೆ ಕೈದಿಗಳು ಪಶ್ಚಾತ್ತಾಪ ಪಡುವ ಶಿಕ್ಷಾ ತಾಣಗಳಾಗಬೇಕು. ಆದರೆ ಧಾರವಾಡದ ಕೇಂದ್ರ ಕಾರಾಗೃಹ ಮಾತ್ರ ಕೈದಿಗಳ ಪಾಲಿಗೆ ಪಂಚತಾರಾ ಹೋಟೆಲ್ ಆಗಿ ಮಾರ್ಪಟ್ಟಿದೆಯೇ ಎಂಬ ಸಂಶಯ ಮೂಡಿದೆ. ಪೋಕ್ಸೋ ಕಾಯ್ದೆಯಡಿ ಜೈಲು ಸೇರಿರುವ ಕೈದಿಯೊಬ್ಬ ಹೊರಗಿನ ಬಾಲಕಿಯೊಂದಿಗೆ ಮಾತನಾಡಿರುವ ಆಡಿಯೋ ಈಗ ಸಂಚಲನ ಮೂಡಿಸಿದೆ. ಪೋಕ್ಸೋ ಪ್ರಕರಣದ ಕೈದಿ ಪರ್ವೇಜ್ ಎಂಬಾತ ಬಾಲಕಿಯೊಂದಿಗೆ ಜೈಲಿನಿಂದಲೇ ಫೋನ್‌ನಲ್ಲಿ ಮಾತನಾಡಿದ್ದಾನೆ. “ಜೈಲಿನಲ್ಲಿ ಹಣ ಕೊಟ್ಟರೆ ಸಾಕು ಸಿಗರೇಟ್, ಸರಾಯಿ (ಮದ್ಯ) ಮತ್ತು ಮೊಬೈಲ್ ಸೇರಿದಂತೆ ಎಲ್ಲವೂ…

Read More

Cooking Oil Price Hike: ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ದರ ಭಾರೀ ಏರಿಕೆ

ಬೆಂಗಳೂರು (ಮಾ.14): ಇರಾನ್-ಇಸ್ರೇಲ್ ಯುದ್ಧದ ಭೀತಿಯು ಇದೀಗ ಗ್ಯಾಸ್ ಸಿಲಿಂಡರ್‌ಗಳ ನಂತರ ಅಡುಗೆ ಎಣ್ಣೆಯ ಮೇಲೂ ಪರಿಣಾಮ ಬೀರಿದೆ. ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಮುನ್ನವೇ ಅಡುಗೆ ಎಣ್ಣೆಯ ದರ ಏರಿಕೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಯುದ್ಧದ ಕಾರಣದಿಂದ ಅಡುಗೆ ಎಣ್ಣೆಯ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಏಜೆಂಟ್‌ಗಳಿಗೆ ಕೇಳಿದರೆ, 100-200 ಬಾಕ್ಸ್‌ಗಳ ಬದಲು ಕೇವಲ 10 ಪ್ರತಿಶತದಷ್ಟು (ಸುಮಾರು 20 ಆಯಿಲ್ ಟ್ಯಾಂಕರ್‌ಗಳು) ಮಾತ್ರ ಪೂರೈಕೆಯಾಗುತ್ತಿದೆ. ಬೆಂಗಳೂರಿನ ಅಡುಗೆ ಎಣ್ಣೆ ಅಂಗಡಿ…

Read More

ಸಂಜು ಸ್ಯಾಮ್ಸನ್ ಫೋಟೋ ಎಡಿಟ್ ಮಾಡಿ ಹಂಚಿಕೊಂಡ್ರಾ ಗಿಲ್: ಇಲ್ಲಿದೆ ನಿಜಾಂಶ

ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾವನ್ನು ಅಭಿನಂದಿಸಿ ಶುಭ್​​ಮನ್ ಗಿಲ್ (Shubman Gill) ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಭಾರತ ತಂಡದ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ ಇರಲಿಲ್ಲ. ಇದರ ಬೆನ್ನಲ್ಲೇ ಶುಭ್​ಮನ್ ಗಿಲ್ ಸಂಜು ಸ್ಯಾಮ್ಸನ್ ಅವರನ್ನು ಫೋಟೋದಿಂದ ಎಡಿಟ್ ಮಾಡಿ ತೆಗೆದುಹಾಕಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದರು. ಇದಕ್ಕೆ ಸಾಕ್ಷಿಯಾಗಿ ಮತ್ತೊಂದು ಪೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಸಂಜು ಸ್ಯಾಮ್ಸನ್ ಜಸ್​ಪ್ರೀತ್ ಬುಮ್ರಾ ಅವರ ಹಿಂಬದಿಯಲ್ಲಿ ನಿಂತಿರುವುದು ಕಾಣುತ್ತಿತ್ತು. ಹೀಗಾಗಿಯೇ ಶುಭ್​ಮನ್…

Read More

ಲಡಾಖ್​​ಗೆ ರಾಜ್ಯ ಸ್ಥಾನಮಾನ ನೀಡುವಂತೆ ಪ್ರತಿಭಟನೆ, 6 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಸೋನಮ್ ವಾಂಗ್​​ಚುಕ್ ಶೀಘ್ರ ಬಿಡುಗಡೆ

ಲಡಾಖ್, ಮಾರ್ಚ್​ 14: ಲಡಾಕ್​ಗೆ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ  ಲೇಹ್ ಲಡಾಖ್(Ladakh)​ನಲ್ಲಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಳಿಕ ಬಂಧನಕ್ಕೊಳಗಾಗಿದ್ದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್​ಚುಕ್ ಅವರನ್ನು ಇದೀಗ ಆರು ತಿಂಗಳ ಬಳಿಕ ಬಿಡುಗಡೆ ಮಾಡಲಾಗುತ್ತಿದೆ.ಸೋನಮ್ ವಾಂಗ್‌ಚುಕ್ ಅವರನ್ನು ಇಂದು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಯಿತು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್​​ಗೆ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರನ್ನು ಪ್ರಚೋದಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.15 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್…

Read More

ಬೆಂಗಳೂರಿನಲ್ಲಿ ಎಲ್​ಪಿಜಿ ಸಿಲಿಂಡರ್ ಎಮರ್ಜೆನ್ಸಿ! ಪ್ರಧಾನಿಗೆ ಪತ್ರ ಬರೆದ ಹೋಟೆಲ್ ಮಾಲಕಿ

ಬೆಂಗಳೂರು, ಮಾರ್ಚ್ 14: ರಾಜ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ (LPG Gas Cylinder) ಕೊರತೆ ತೀವ್ರವಾಗಿರುವ ಹಿನ್ನೆಲೆ ಮಹಿಳಾ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗೆ ತುರ್ತು ಪರಿಹಾರ ಒದಗಿಸುವಂತೆ ಬೆಂಗಳೂರಿನ ಗಾಂಧಿನಗರದಲ್ಲಿರುವ ‘ರಸಪಾಕ’ ಹೋಟೆಲ್ ಮಾಲಕಿ ರೂಪಾ ಶಾಸ್ತ್ರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲೇನಿದೆ? ಕರ್ನಾಟಕದ ನಾರಿ ಶಕ್ತಿ ಪರವಾಗಿ ಪತ್ರ ಬರೆದಿರುವ ರೂಪಾ ಶಾಸ್ತ್ರಿ, ಕಳೆದ ಕೆಲವು ವಾರಗಳಿಂದ ವಾಣಿಜ್ಯ ಅಡುಗೆ ಅನಿಲದ ತೀವ್ರ ಕೊರತೆ ಮತ್ತು ಬೆಲೆ ಏರಿಕೆಯು ಹೋಟೆಲ್…

Read More

Shani Dev: ಶನಿವಾರದ ಆಚರಣೆ; ಈ ದಿನ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಬಗ್ಗೆ ಇಲ್ಲಿ ತಿಳಿಯಿರಿ

ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರಕ್ಕೂ ತನ್ನದೇ ಆದ ವಿಶೇಷ ಮಹತ್ವವಿದೆ. ಅದರಲ್ಲೂ ವಿಶೇಷವಾಗಿ ‘ಶನಿವಾರ’ವು ಶನಿ ದೇವನಿಗೆ ಅರ್ಪಿತವಾದ ದಿನ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರದಂದು ಅನುಸರಿಸುವ ಕೆಲವು ಆಚರಣೆಗಳು ನಮ್ಮ ಜೀವನದ ಅದೃಷ್ಟ ಮತ್ತು ದುರದೃಷ್ಟದ ಮೇಲೆ ನೇರ ಪರಿಣಾಮ ಬೀರುತ್ತವೆ. ಹಾಗಾದರೆ, ಈ ದಿನ ಯಾವ ಕೆಲಸಗಳನ್ನು ಮಾಡಬೇಕು? ಯಾವುದನ್ನು ತಪ್ಪಿಸಬೇಕು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಶನಿವಾರ ಈ ಕೆಲಸಗಳನ್ನು ತಪ್ಪಿಸಿ: ಜ್ಯೋತಿಷ್ಯದ ಪ್ರಕಾರ ಶನಿ ಮತ್ತು ಮಂಗಳ ಗ್ರಹಗಳ ನಡುವೆ ವೈರತ್ವವಿದೆ. ಹೀಗಾಗಿ,…

Read More