ವಿಧಾನಸೌಧ ಪಡಸಾಲೆಯಲ್ಲಿ ನಗದು, ಚಿನ್ನ ಇದ್ದ ಬ್ಯಾಗ್ ಬಿಟ್ಟುಹೋದ ವ್ಯಕ್ತಿ! – Kannada News | Man leaves bag containing cash and gold in Vidhana Soudha lobby
ಬೆಂಗಳೂರು, ಫೆಬ್ರವರಿ 10: ವಿಧಾನಸೌಧದ ಸಚಿವರ ಕಚೇರಿಯೊಂದರ ಬಳಿ ವ್ಯಕ್ತಿಯೊಬ್ಬರು 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಬಿಟ್ಟುಹೋದ ಘಟನೆ ನಡೆದಿದೆ. ನವೀನ್ ಎಂಬವರು ಸಚಿವರೊಬ್ಬರನ್ನು ಭೇಟಿಯಾಗಲು ಬಂದಾಗ ಕೈಚೀಲವನ್ನು ಮರೆತುಹೋಗಿದ್ದರು. ಮರುದಿನ ಬಂದಾಗ ಚೀಲ ಅಲ್ಲಿ ಇಲ್ಲದೇ ಇದ್ದುದು ಕಂಡು ಗಾಬರಿಯಾಗಿದ್ದಾರೆ. ನಂತರ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಡಿ ಗ್ರೂಪ್…