ಯಾರೂ ಸಹ ಈ ರೀತಿ ರನೌಟ್ ಮಾಡಬೇಡಿ: ಕೈಫ್ ಕಿವಿಮಾತು
ಪಾಕಿಸ್ತಾನ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡದ ನಾಯಕ ಮೆಹಿದಿ ಹಸನ್ ಮಿರಾಝ್ ಅವರು ಸಲ್ಮಾನ್ ಅಲಿ ಅಘಾ ಅವರನ್ನು ರನ್ ಔಟ್ ಮಾಡಿದ ರೀತಿಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ವಿಕೆಟ್ ಪಡೆಯುವ ಹಪಾಹಪಿಯು ಕ್ರೀಡಾ ಸ್ಫೂರ್ತಿಗಿಂತ ದೊಡ್ಡದಲ್ಲ. ಇದು ವಿಶ್ವಕಪ್ ಫೈನಲ್ ಪಂದ್ಯವಾಗಿದ್ದರೂ ಸಹ ಇಂತಹ ಕೆಲಸ ಮಾಡಬಾರದು. ಯುವ ಕ್ರಿಕೆಟಿಗರು ಇದನ್ನು ಎಂದಿಗೂ ಅನುಕರಿಸಬಾರದು ಎಂದು ಮೊಹಮ್ಮದ್ ಕೈಫ್ ಸೋಷಿಯಲ್ ಮೀಡಿಯಾ ಮೂಲಕ ಕಿವಿಮಾತು ಹೇಳಿದ್ದಾರೆ….