Headlines

ತಂಬಾಕು ಬೆಳೆಗಾರರ ನೆರವಿಗೆ ನಿಂತ ಕೇಂದ್ರ ಸರ್ಕಾರ: ಸೋಮವಾರದಿಂದಲೇ ಖರೀದಿ ಆರಂಭದ ಭರವಸೆ

ದೆಹಲಿ, ಮಾರ್ಚ್​​ 13: ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರ ಜತೆ ಮಾತುಕತೆ ನಡೆಸಿದ್ದು, ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಲಾಗಿದೆ.  ಆ ಬೆನ್ನಲ್ಲೇ  ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ. ಸೋಮವಾರದಿಂದಲೇ ತಂಬಾಕು ಖರೀದಿ, ವಿದೇಶ ಮಾರುಕಟ್ಟೆಗಳಿಗೆ ರಫ್ತು,…

Read More

‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ‘ಆಕಾಶ್’ ಸಿನಿಮಾ (Akash movie) ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದೆ. ಹಲವು ಚಿತ್ರಮಂದಿರಗಳಲ್ಲಿ ಅಪ್ಪು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಎದುರು ಫ್ಯಾನ್ಸ್ ಸಂಭ್ರಮ ಜೋರಾಗಿತ್ತು. ಸಿನಿಮಾದ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಲಾಯಿತು. ಪುನೀತ್ ರಾಜ್​ಕುಮಾರ್ ಅವರಿಗೆ ಜೈಕಾರ ಕೂಗಲಾಯಿತು. ಮಾರ್ಚ್ 17ರಂದು ಅಪ್ಪು ಜನ್ಮದಿನ. ಆ ಪ್ರಯುಕ್ತ ಅಭಿಮಾನಿಗಳ ಖುಷಿಗಾಗಿ ‘ಆಕಾಶ್’ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿದೆ. ಪುನೀತ್ (Puneeth Rajkumar) ಕುಟುಂಬದ ಸದಸ್ಯರು ಮತ್ತು…

Read More

ಭಾರತವನ್ನು ಗೇಲಿ ಮಾಡಿದ್ದ ಪಾಕ್ ಕ್ರಿಕೆಟಿಗನ ಖರೀದಿಸಿ ಕೆಟ್ಟ ಕಾವ್ಯ ಮಾರನ್

ದಿ ಹಂಡ್ರೆಡ್‌ (The Hundred) ಲೀಗ್ ಹರಾಜಿನಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಬ್ರಾರ್ ಅಹ್ಮದ್​ನನ್ನು ಕಾವ್ಯ ಮಾರನ್ ( Kavya Maran) ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿ ಖರೀದಿ ಮಾಡಿರುವುದು ಭಾರತೀಯರನ್ನು ಕೆರಳಿಸಿದೆ. ನಿನ್ನೆ ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್​ನ (Abrar Ahmed) ಕಾವ್ಯ ಮಾರನ್ ಖರೀದಿ ಮಾಡುತ್ತಿದ್ದಂತೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ, ಈ ಹಿಂದೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಅಬ್ರಾರ್ ಅಹ್ಮದ್ ಭಾರತೀಯ ವಾಯುಪಡೆಯನ್ನು ಅಪಹಾಸ್ಯ ಮಾಡಿದ್ದ ಫೋಟೋ ಹಾಗೂ…

Read More

ಕಲಬುರಗಿಯಲ್ಲಿ ಸಿಲಿಂಡರ್ ಕೊರತೆ: ಸೌದೆ ಒಲೆ ಮೇಲೆ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್​ ಸಿಬ್ಬಂದಿ

ಕಲಬುರಗಿ, ಮಾರ್ಚ್​​ 13: ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ ನಮ್ಮ ರಾಜ್ಯಕ್ಕೂ ಅದರ ಪರಿಣಾಮ ನೇರವಾಗಿ ತಟ್ಟಿದೆ. ಸಿಲಿಂಡರ್​ಗಳ (LPG cylinder) ಪೂರೈಕೆಯಲ್ಲಿ ವ್ಯತ್ಯಯ ಶುರುವಾಗಿದೆ. ಇತ್ತ ಕಲಬುರಗಿಯಲ್ಲಿ ಇಂದಿರಾ ಕ್ಯಾಂಟಿನ್ (Indira Canteen)​​​ ಅಡುಗೆ ಮಾಡುವುದಕ್ಕೆ ಸೌದೆ ಒಲೆಯೇ ಗತಿ ಎನ್ನುವಂತಾಗಿದೆ. ಕಳೆದ ಹತ್ತು ದಿನಗಳಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದೆ. ಅದು ಎಲ್​ಲಿಜಿ ಸಿಲಿಂಡರ್​ಗಳ ಮೇಲೆ ನೇರ ಪರಿಣಾಮ ಬೀರಿದ. ಇರಾನ್ – ಇಸ್ರೇಲ್ ಯುದ್ದದಿಂದ ಕಲಬುರಗಿಯಲ್ಲಿಯೂ…

Read More

ಸ್ವಪಕ್ಷೀಯರ ವಿರೋಧಕ್ಕೂ ಡೋಂಟ್​​ಕೇರ್​: ಬಜೆಟ್​​ ಕುರಿತ ಹೇಳಿಕೆ ಸಮರ್ಥಿಸಿಕೊಂಡ ಇಕ್ಬಾಲ್ ಹುಸೇನ್

ಬೆಂಗಳೂರು, ಮಾರ್ಚ್​​ 13: ಕರ್ನಾಟಕ ಬಜೆಟ್ ಕುರಿತು ತಮ್ಮ ಹೇಳಿಕೆಗೆ ಸ್ವಪಕ್ಷ ನಾಯಕರ ಆಕ್ರೋಶದ ನಡುವೆಯೂ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತಾವು ಆಡಿದ್ದ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಬಜೆಟ್ ಸಮಾಧಾನ ತಂದಿಲ್ಲ ಮತ್ತು ತಮ್ಮ ನಂಬಿಕೆ ಹುಸಿಯಾಗಿದೆ ಎಂದು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಐಎಎಸ್ ಅಥವಾ ಕೆಎಎಸ್ ಅಧಿಕಾರಿ ಅಲ್ಲ. ಬದಲಿಗೆ ಜನರ ಮತದಿಂದ ಆಯ್ಕೆಯಾದ ಜನಪ್ರತಿನಿಧಿ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯವಾಗಿದೆ. ನನ್ನ ಕ್ಷೇತ್ರವಾದ ರಾಮನಗರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ಹಲವಾರು ಬಾರಿ…

Read More

Jupiter Transit: ಗುರು ಪುನರ್ವಸು ನಕ್ಷತ್ರದಲ್ಲಿ ಸಂಚಾರ; 4 ರಾಶಿಗಳಿಗೆ ಅದೃಷ್ಟದ ಸುರಿಮಳೆ

​ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿಯನ್ನು ಶುಭ ಗ್ರಹ ಎಂದು ಕರೆಯಲಾಗುತ್ತದೆ. ಗುರುವು ಜ್ಞಾನ, ಸಂತಾನ, ಭಾಗ್ಯ ಮತ್ತು ಸಮೃದ್ಧಿಯ ಕಾರಕ. ಪ್ರಸ್ತುತ ಗುರುವು ಮಿಥುನ ರಾಶಿಯ ಪುನರ್ವಸು ನಕ್ಷತ್ರದ ಮೂಲಕ ಸಂಚರಿಸುತ್ತಿದ್ದಾನೆ. ಪುನರ್ವಸು ನಕ್ಷತ್ರದ ಅಧಿಪತಿಯೂ ಸ್ವತಃ ಗುರುವೇ ಆಗಿರುವುದರಿಂದ, ಈ ಸಂಚಾರವು ಅತ್ಯಂತ ಶಕ್ತಿಯುತ ಹಾಗೂ ಪ್ರಭಾವಶಾಲಿಯಾಗಿದೆ. ​ಗುರುವಿನ ದೃಷ್ಟಿ ಸ್ಥಾನ: ​ಗುರುವು ತಾನು ಕುಳಿತಿರುವ ಸ್ಥಾನದಿಂದ 5, 7 ಮತ್ತು 9ನೇ ಮನೆಯನ್ನು ಪೂರ್ಣ ದೃಷ್ಟಿಯಿಂದ ನೋಡುತ್ತಾನೆ. ಮಿಥುನ ರಾಶಿಯಲ್ಲಿರುವ ಗುರುವು ಈ ಕೆಳಗಿನ…

Read More

ಮದುವೆಯಾಗ್ತೀನೆಂದು ನಂಬಿಸಿ 4 ವರ್ಷ ಲಿವ್​-ಇನ್​ ಸಂಬಂಧದಲ್ಲಿದ್ದು ಕೈಕೊಟ್ಟ ಪೊಲೀಸ್, ಮಹಿಳೆ ಆತ್ಮಹತ್ಯೆ

ಆಗ್ರಾ,ಮಾರ್ಚ್​ 13: ಮದುವೆ(Marriage)ಯಾಗುವುದಾಗಿ ನಂಬಿಸಿ 4 ವರ್ಷ ಲಿವ್-ಇನ್ ಸಂಬಂಧದಲ್ಲಿದ್ದು ಪೊಲೀಸ್ ಕಾನ್​​ಸ್ಟೆಬಲ್ ಕೈಕೊಟ್ಟಿದ್ದಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ವರ್ಷಗಳ ಕಾಲ ಆತ ದೈಹಿಕ ಹಾಗೂ ಮಾನಸಿಕ ಶೋಷಣೆಯಾಗಿದೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಜೆ.ವಿ. ಗೌತಮ್ ನಾಲ್ಕು ವರ್ಷಗಳಿಂದ ತನ್ನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು ಎಂದು ಮಹಿಳೆ ಹೇಳಿದ್ದಾಳೆ. ಮದುವೆಯಾಗುವ ಭರವಸೆ ನೀಡಿದ್ದ ತಾನು ಆತನೊಂದಿಗೆ ಪತ್ನಿಯಂತೆಯೇ ಸಂಸಾರ ನಡೆಸಿದ್ದೇನೆ ಬಳಿಕ…

Read More

ಅನುರಾಗ್ ದೊಭಾಲ್ ಆರೋಗ್ಯದಲ್ಲಿ ಚೇತರಿಕೆ: ಐಸಿಯುನಿಂದ ಹೊರಬಂದ ಯೂಟ್ಯೂಬರ್

ಹಿಂದಿ ‘ಬಿಗ್ ಬಾಸ್ 17’ ಸ್ಪರ್ಧಿ ಹಾಗೂ ಖ್ಯಾತ ಯೂಟ್ಯೂಬರ್ ಅನುರಾಗ್ ದೋಭಾಲ್ (Anurag Dobhal) ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಮಾರ್ಚ್ 7ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಅನುರಾಗ್, ಇದೀಗ ಐಸಿಯುನಿಂದ (ICU) ಹೊರಬಂದಿದ್ದಾರೆ ಎಂದು ಅವರ ಮ್ಯಾನೇಜರ್ ರೋಹಿತ್ ಪಾಂಡೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಅನುರಾಗ್ ನಗುತ್ತಾ ವಿಕ್ಟರಿ ಸಿಂಬಲ್ ತೋರಿಸುತ್ತಿರುವ ಫೋಟೋವನ್ನು ರೋಹಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಅನುರಾಗ್ ಭಾಯ್ ಐಸಿಯುನಿಂದ ಹೊರಬಂದಿದ್ದಾರೆ. ನಾವು…

Read More

ಪೂರೈಕೆ ವ್ಯತ್ಯಯದ ನಡುವೆ LPG ಸಿಲಿಂಡರ್​​ಗೆ ಕಳ್ಳರ ಕಾಟ: ಮನೆಯ ಕಾಂಪೌಂಡ್​​ಗೆ ನುಗ್ಗಿ ಕದ್ದು ಎಸ್ಕೇಪ್​​!

ರಾಮನಗರ, ಮಾರ್ಚ್​ 13: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಹಡಗುಗಳು ಬಾರದೆ ದೇಶದ ಬಹುತೇಕ ರಾಜ್ಯಗಳಲ್ಲಿ ಎಲ್​​ಪಿಜಿ ವಾಣಿಜ್ಯ ಸಿಲಿಂಡರ್​​ಗಳ ಅಭಾವ ತಲೆದೋರಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಸಮಸ್ಯೆ ತೀರಾ ಹದಗೆಟ್ಟಿದ್ದು, ಸಿಲಿಂಡರ್​​ಗಳ ಅಲಭ್ಯತೆಯ ಹಿನ್ನೆಲೆ ಬಹುತೇಕ ಹೋಟೆಲ್​​ಗಳು ಭಾಗಶಃ ಬಂದ್​ ಆಗಿವೆ. ಇಲ್ಲವೇ ಗಣನೀಯವಾಗಿ ಮೆನು ಕಡಿತಗೊಳಿಸಿ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಪಿಜಿಗಳು ಮತ್ತು ಸರಕಾರಿ ಶಾಲೆಗಳಲ್ಲಿ ಊಟ ತಯಾರಿಕೆಗೂ ಸಂಕಷ್ಟ ಬಂದೊದಗಿದ್ದು, ಹೆಚ್ಚಿನ ಹಣ ಕೊಡುತ್ತೇವೆ ಎಂದರೂ ಸಿಲಿಂಡರ್​​ಗಳು ಸಿಗುತ್ತಿಲ್ಲ ಎಂದು ಆಹಾರೋದ್ಯಮಿಗಳು ಅಲವತ್ತುಕೊಳ್ಳುತ್ತಿದ್ದಾರೆ. ಇದೇ ಸ್ಥಿತಿಯನ್ನು…

Read More

ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ

ಬೆಂಗಳೂರು, ಮಾರ್ಚ್ 13: ಡಿಜಿಟಲ್ ಇಂಡಿಯಾದಂತಹ ಮಹತ್ವಾಕಾಂಕ್ಷಿ ಯೋಜನೆ ನಡೆಸುತ್ತಿರುವ ಭಾರತದಲ್ಲಿ ಈಗಲೂ ಕೂಡ ಸಾವಿರಾರು ಹಳ್ಳಿಗಳಿಗೆ ಮೊಬೈಲ್ ನೆಟ್ವರ್ಕ್ (Mobile Network) ಇಲ್ಲವೇ ಇಲ್ಲ. ಲೋಕಸಭೆಯಲ್ಲಿ ದೂರಸಂಪರ್ಕ ಇಲಾಖೆ ಹಂಚಿಕೊಂಡಿರುವ ದತ್ತಾಂಶದ ಪ್ರಕಾರ, 2026ರ ಜನವರಿ 31ರವರೆಗೂ ಮೊಬೈಲ್ ನೆಟ್ವರ್ಕ್ ಇಲ್ಲದ ಹಳ್ಳಿಗಳ ಸಂಖ್ಯೆ 8,985 ಎನ್ನಲಾಗಿದೆ. ಈ ವಿಚಾರದಲ್ಲಿ ಕಳಪೆ ಸಾಧನೆ ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಇದೆ. ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಮೊಬೈಲ್ ನೆಟ್ವರ್ಕ್ ಸ್ಥಾಪನೆಯಾಗಿಲ್ಲ. ದಕ್ಷಿಣ ರಾಜ್ಯಗಳಲ್ಲೇ ಕರ್ನಾಟಕದ್ದು ಹೀನಾಯ ಸಾಧನೆ….

Read More