ಮುಟ್ಟಿನ ರಜೆಗಾಗಿ ಕಡ್ಡಾಯ ಕಾನೂನು ತರಬೇಕು ಎಂಬ ಬೇಡಿಕೆ ತಿರಸ್ಕರಿಸಿದ ಸುಪ್ರೀಂ, ಕೊಟ್ಟ ಕಾರಣವೇನು?
ನವದೆಹಲಿ, ಮಾರ್ಚ್ 13: ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ(Menstrual Leave) ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಮುಟ್ಟಿನ ರಜೆಗಾಗಿ ಕಡ್ಡಾಯ ಕಾನೂನು ತರಬೇಕು ಎನ್ನುವ ಬೇಡಿಕೆಯನ್ನು ತಿರಸ್ಕರಿಸಿದೆ.ಅಂತಹ ಕಾನೂನು ಜಾರಿಗೆ ತಂದರೆ ಕಚೇರಿಗಳನ್ನು ಹೆಣ್ಣುಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವಲ್ಲಿ ಮಾಲೀಕರು ಹಿಂದೇಟು ಹಾಕುತ್ತಾರೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಶುಕ್ರವಾರ ಹೇಳಿದ್ದಾರೆ. ರಾಜ್ಯಗಳು ಮುಟ್ಟಿನ ರಜೆ ನಿಯಮಗಳನ್ನು ರೂಪಿಸಲು ನಿರ್ದೇಶನ ಕೋರಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ ಅರ್ಜಿಯನ್ನು ಇಂದು(ಮಾರ್ಚ್13)ವಿಚಾರಣೆ ನಡೆಸಿದ…