ಎಲ್‌ಪಿಜಿ ಬುಕಿಂಗ್ ಬಗ್ಗೆ ನಿಮಗೂ ಈ ರೀತಿ ಮೆಸೇಜ್ ಬರುತ್ತಾ? ತಪ್ಪಿಯೂ ಯಾಮಾರಬೇಡಿ
ಬೆಂಗಳೂರು, ಮಾರ್ಚ್ 12: ಇರಾನ್- ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ಮೂರು ದೇಶಗಳ ನಡುವಿನ ಸಂಘರ್ಷದಿಂದ ಗಲ್ಫ್ ರಾಷ್ಟ್ರಗಳ ಮೇಲೆ ಕೂಡ ದಾಳಿ ಮುಂದುವರೆದಿದ್ದು, ಇದರ ಪರಿಣಾಮವಾಗಿ ಹಲವು ದೇಶಗಳಲ್ಲಿ ತೈಲ, ಗ್ಯಾಸ್ ಮುಂತಾದ ಸೌಕರ್ಯಗಳ ಬಿಕ್ಕಟ್ಟು ಎದುರಾಗಿದೆ. ಬೆಂಗಳೂರು ಸೇರಿದಂತೆ ಭಾರತದ ಅನೇಕ ಪ್ರಮುಖ ನಗರಗಳ ಹೋಟೆಲ್, ರೆಸ್ಟೋರೆಂಟ್, ಹಾಸ್ಟೆಲ್ಗಳಲ್ಲಿ ಎಲ್‌ಪಿಜಿ ಕೊರತೆ (LPG Crisis) ಎದುರಾಗಿದ್ದು, ಅವುಗಳ ಬಾಗಿಲು ಮುಚ್ಚಲಾಗುತ್ತಿದೆ. ಇಂಧನ ಪೂರೈಕೆಯಲ್ಲಿನ ಕೊರತೆಯ ಭಯದ…