ಮತ್ತೆ ಬರ್ತಿದೆ ‘ಅಗ್ನಿ ಸಾಕ್ಷಿ’; ಧಾರಾವಾಹಿಗೆ ನಾಯಕ ಯಾರು?
ಕಲರ್ಸ್ ಕನ್ನಡದಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿ ಈ ಮೊದಲು ಪ್ರಸಾರ ಕಂಡು ಭಾರೀ ವೀಕ್ಷಣೆ ಕಂಡಿತ್ತು. ಹಲವು ವರ್ಷಗಳ ಕಾಲ ಈ ಸೀರಿಯಲ್ ಪ್ರಸಾರ ಆಯಿತು. ಈಗ ಧಾರಾವಾಹಿಯು ಮತ್ತೆ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯು ಪ್ರೋಮೋ ಹಂಚಿಕೊಂಡಿದೆ. ಇದು ವೀಕ್ಷಕರಿಗೆ ಸಾಕಷ್ಟು ಗಮನ ಸೆಳೆದಿದೆ. ಹಳೆಯ ಮ್ಯೂಸಿಕ್ ಅನ್ನು ಬಳಸಲಾಗಿದೆ. ‘ಅಗ್ನಿಸಾಕ್ಷಿ’ ಧಾರವಾಹಿಯು 2013ರ ಡಿಸೆಂಬರ್ 2ರಂದು ಪ್ರಸಾರ ಆರಂಭಿಸಿತು. ಆ ಬಳಿಕ ಧಾರಾವಾಹಿ ಬರೋಬ್ಬರಿ 6 ವರ್ಷ…