ಈಡೇರಲಿಲ್ಲ ಚಂಗಡಿ ಗ್ರಾಮಸ್ಥರ ಕನಸು: ಕಲ್ಲು-ಮುಳ್ಳಿನ ಹಾದಿ, 23 ಕಿಮೀ ಕಾಡಿನಲ್ಲಿ ಜನರ ನಿತ್ಯ ದರ್ಶನ
ಚಾಮರಾಜನಗರ, ಮಾರ್ಚ್ 10: ಆ ಕಾಡಿನ ಗ್ರಾಮಸ್ಥರಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ನಡೆದ ಸಚಿವ ಸಂಪುಟ ಸಭೆ ಹಲವು ಭರವಸೆ ಹುಟ್ಟು ಹಾಕಿತ್ತು. ಸಮಾಜದ ಮುಖ್ಯವಾಹಿನಿಗೆ ಸೇರಬೇಕೆಂಬ ಕನಸು ಇನ್ನೇನು ನನಸಾಗಿಯೇ ಬಿಡುತ್ತದೆ ಎಂಬ ನಿರೀಕ್ಷೆ ಹೊತ್ತಿದ್ದರು. ಆದರೆ ಸಚಿವ ಸಂಪುಟ ಸಭೆ ಆ ಕಾಡಿನ ಗ್ರಾಮಸ್ಥರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. 23 ಕಿ.ಮೀ ಕಾಡಿನಲ್ಲಿ ಜನರ ನಿತ್ಯ ದರ್ಶನ ಮಲೆ ಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿರುವ ಚಂಗಡಿ ಗ್ರಾಮ ಮೂಲ ಸೌಕರ್ಯಗಳ ಕೊರತೆ, ವನ್ಯಜೀವಿಗಳ…