Headlines

ಶಾಲೆಯಲ್ಲಿ ಅಡುಗೆ ಮಾಡುವ ಮಹಿಳಾ ಕುಕ್​​ ಜತೆ ಹೆಡ್​​ ಮಾಸ್ಟರ್​ ಕುಚ್ ಕುಚ್: ಗ್ರಾಮಸ್ಥರಿಂದ ಬಿತ್ತು ಗೂಸ

ರೂರ್ಕೆಲಾ, ಮಾ.9: ಶಾಲೆ ಎಂದರೆ ದೇವಾಲಯ ಇದ್ದಂತೆ, ಇಲ್ಲಿ ಶಿಕ್ಷಕರು ಏನು ಕಲಿಸುತ್ತಾರೆ ಅದನ್ನೇ ಮಕ್ಕಳು ಕಲಿಯುತ್ತಾರೆ. ಮನೆಯವರು ಕೂಡ ಶಿಕ್ಷಕರ ಮೇಲಿ ನಂಬಿಕೆಯಿಂದ ಶಾಲೆಗೆ ಕಳುಹಿಸುತ್ತಾರೆ. ಆದರೆ ಶಿಕ್ಷಕರೇ ಕೆಟ್ಟಾಗಿ ನಡೆದುಕೊಂಡರೆ ಮಕ್ಕಳಿಗೆ ಏನು ಕಲಿಸುತ್ತಾರೆ. ಇದೀಗ ಒಡಿಶಾದ ರೂರ್ಕೆಲಾದಲ್ಲಿ ಹೆಡ್​​ ಮಾಸ್ಟರ್ ಶಾಲೆಯಲ್ಲಿ ಕೆಲಸ ಮಾಡುವ​​ ಮಹಿಳೆಯ ಜತೆಗೆ ಸಂಬಂಧ ಇಟ್ಟುಕೊಂಡಿರುವ ಘಟನೆಯೊಂದು ನಡೆದಿದೆ. ಅಡುಗೆ ಸಹಾಯಕಿ ಜೊತೆ ಅಕ್ರಮ ಸಂಬಂಧ ಬೆಳೆಸಿ ಸಿಕ್ಕಿಬಿದ್ದ ಘಟನೆ ಸುಂದರಘಡ ಜಿಲ್ಲೆಯ ಸೇವಾಶ್ರಮ ಶಾಲೆಯಲ್ಲಿ ನಡೆದಿದೆ. ಆಕ್ರೋಶಗೊಂಡ…

Read More

ಪೋಕ್ಸೋ ಪ್ರಕರಣ: ಮಲ್ಲಿಕಾರ್ಜು ಮುತ್ಯಾಗೆ ಬಿಗ್ ಶಾಕ್ ಕೊಟ್ಟ ಕೋರ್ಟ್

ಯಾದಗಿರಿ (ಮಾರ್ಚ್ 09): ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಮುತ್ಯಾ (Mallikarjun Mutya) ನಿರೀಕ್ಷಣಾ ಜಾಮೀನು ಅರ್ಜಿ (Bail Plea)  ವಜಾಗೊಂಡಿದೆ. ತಮ್ಮ ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ್ದ ಯಾದಗಿರಿ (Yadagir ) ಜಿಲ್ಲಾ ಪ್ರಧಾನ, ವಿಶೇಷ ಸತ್ರ ನ್ಯಾಯಾಲಯದ   ನ್ಯಾಯಾಧೀಶರಾದ ಮರಳುಸಿದ್ದರಾಧ್ಯ ಅವರು ಇಂದು (ಮಾರ್ಚ್ 09) ವಜಾ ಮಾಡಿ ಆದೇಶ ಹೊರಡಿಸಿದ್ದಾರೆ….

Read More

‘ಬಾಸ್’ ಸಿನಿಮಾದಲ್ಲಿ ರೇಣುಕಾಸ್ವಾಮಿ ಸಾವಿನ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ

ತನುಶ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾದ ಟೀಸರ್ (Boss Movie Teaser) ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ವಿ. ಲವ ಅವರು ನಿರ್ದೇಶನ ಮಾಡಿದ್ದಾರೆ. ಟೀಸರ್ ನೋಡಿದ ಎಲ್ಲರಿಗೂ ಅಚ್ಚರಿ ಆಗಿದೆ. ಕಥೆಯ ಎಳೆ ನೋಡಿದರೆ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣ ನೆನಪಿಗೆ ಬರುತ್ತದೆ. ಆ ಬಗ್ಗೆ ನಿರ್ದೇಶಕ ಲವ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದು ದರ್ಶನ್ (Darshan) ಪ್ರಕರಣದ ಕುರಿತಾದ ಸಿನಿಮಾ ಅಲ್ಲ ಎಂದು ಅವರು ಹೇಳಿದ್ದಾರೆ. ‘ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಅದರ ಬಗ್ಗೆ ಸಿನಿಮಾ…

Read More

ಹಿಟ್​​ ಆ್ಯಂಡ್​​ ರನ್​​ ಕೇಸ್​​ಗೆ ಟ್ವಿಸ್ಟ್​: KSRTC ಬಸ್​​ ಡ್ಯಾಶ್​​ ಕ್ಯಾಮರಾದಿಂದ ರಿವೀಲ್​​ ಆಯ್ತು ಸ್ಫೋಟಕ ಸತ್ಯ

ಧಾರವಾಡ, ಮಾರ್ಚ್​​ 09: ಸವದತ್ತಿ ರಸ್ತೆಯ ಅಮಿನಭಾವಿ ಸಮೀಪ ಫೆಬ್ರವರಿ 26ರಂದು ನಡೆದಿದ್ದ ಅಪಘಾತ​​ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಕಪ್ಪು ಬಣ್ಣದ ಎಸ್‌ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಲಲಿತಾ (42) ದಾರುಣವಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆ ಧಾರವಾಡ ಪೊಲೀಸರು ಹಿಟ್​​​ ಆ್ಯಂಡ್​​ ರನ್ ಕೇಸ್​​ ದಾಖಲು ಮಾಡಿಕೊಂಡಿದ್ದರು. ಆದರೆ ಘಟನೆ ಮೊದಲಿಗೆ ಸಹಜ ಅಪಘಾತದಂತೆ ಕಂಡರೂ ರಾಜ್ಯ ಸಾರಿಗೆ ಸಂಸ್ಥೆಯ (KSRTC) ಬಸ್‌ನ ಡ್ಯಾಶ್‌ಕ್ಯಾಮ್ ದೃಶ್ಯಗಳು ಅಸಲಿ ಸತ್ಯ ಬಿಚ್ಚಿಟ್ಟಿವೆ. ಇದೊಂದು…

Read More

ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ: ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷ ಪಾಪು

ಮಂಡ್ಯ, (ಮಾರ್ಚ್ 09): ಕೌಟುಂಬಿಕ ಕಲಹಕ್ಕೆ 2 ವರ್ಷದ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಆದರೆ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪವಾಡದಂತೆ ಬದುಕುಳಿದಿದ್ದು, ಇದೀಗ ತಂದೆ ತಾಯಿ ಇಲ್ಲದೇ ಅನಾಥವಾಗಿದೆ. ಈ ಹೃದಯ ವಿದ್ರಾವಕ ಘಟನೆ ಮಂಡ್ಯದ (Mandya) ಕೆ.ಆರ್.ಪೇಟೆ (KR Pete) ಪಟ್ಟಣದಲ್ಲಿ ನಡೆದಿದೆ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಕಳೆದ ಮೂರು ವರ್ಷದ‌ ಹಿಂದೆ ವಿವಾಹವಾಗಿದ್ದರು….

Read More

ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್​​ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್​​ ಮಹತ್ವದ ಎಚ್ಚರಿಕೆ

ಟೆಹ್ರಾನ್ಮ, ಮಾ.9: ಇಸ್ರೇಲ್​​​​, ಅಮೆರಿಕ ದಾಳಿಯಲ್ಲಿ ತಮ್ಮ ಪರಮೋಚ್ಚ ನಾಯಕ ಕಳೆದುಕೊಂಡಿರುವ ಇರಾನ್​​, ಇದೀಗ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ಆದರೆ ಈ ಆಯ್ಕೆಗೆ ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.  ಇರಾನ್‌ನ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಸೋಮವಾರ ಮಧ್ಯರಾತ್ರಿ ಮಹತ್ವದ ಘೋಷಣೆ ಮಾಡಿದ್ದು, ಅಯತೊಲ್ಲಾ ಸಯ್ಯದ್ ಮೊಜ್ತಬಾ ಹೊಸೇನಿ ಖಮೇನಿ (Mojtaba Khamenei) ಅವರನ್ನು ದೇಶದ ನೂತನ ಪರಮೋಚ್ಚ ನಾಯಕನನ್ನಾಗಿ ನೇಮಿಸಿದೆ. ಕಳೆದ ವಾರ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಹತರಾದ ಬೆನ್ನಲ್ಲೇ ಈ ನಿರ್ಧಾರ…

Read More

ಆಲ್ಕೋಹಾಲ್‌ ಜೊತೆ ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದಂತೆ; ಯಾಕೆ ಗೊತ್ತಾ?

ಇಂದಿನ ಈ ವೇಗದ ಜಗತ್ತಿನಲ್ಲಿ ಮದ್ಯಪಾನವು (Alcohol) ಅನೇಕ ಜನರ ಜೀವನಶೈಲಿಯ ಭಾಗವಾಗಿದ್ದು, ಮನಸ್ಸಿನ ಭಾರ, ಒತ್ತಡ ಕಡಿಮೆ ಮಾಡಲು, ಖುಷಿ, ಸಂತೋಷವನ್ನು ಹಂಚಿಕೊಳ್ಳಲು ಡ್ರಿಂಕ್ಸ್‌ ಮಾಡುತ್ತಾರೆ.  ಹೀಗೆ ಮದ್ಯ ಸೇವಿಸುವಾಗ ಹೆಚ್ಚಿನವರು ಸೈಡ್ಸ್‌ಗೆ ಉಪ್ಪಿನಕಾಯಿ, ಕಬಾಬ್‌, ಕುರುಕುಲು ತಿಂಡ, ಖಾರ ತಿಂಡಿ ಸೇರಿದಂತೆ  ಏನಾದ್ರೂ ತಿನಿಸು ತಿನ್ನುತ್ತಾರೆ. ಆದ್ರೆ ಮದ್ಯ ಸೇವನೆ ಮಾಡುವ ಸಂದರ್ಭದಲ್ಲಿ ಈ ಕೆಲವು ಆಹಾರಗಳನ್ನು ತಪ್ಪಿಯೂ ಸೇವನೆ ಮಾಡಬಾರದಂತೆ. ಏಕೆಂದರೆ ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಿದ್ರೆ ಆಲ್ಕೋಹಾಲ್‌…

Read More

US Consul General: ಮರಿಯಾನಾ ಎಲ್. ನೈಶುಲರ್‌ ಚೆನ್ನೈನ ಯುಎಸ್ ಕಾನ್ಸಲ್ ಜನರಲ್ ಆಗಿ ಅಧಿಕಾರ ಸ್ವೀಕಾರ

ಚೆನ್ನೈ, ಮಾರ್ಚ್ 9: ಮರಿಯಾನಾ ಎಲ್. ನೈಶುಲರ್ (Mariana L. Neisuler) ಅವರು ಕಳೆದ ವಾರ (ಮಾ. 2) ಚೆನ್ನೈನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್‌ನ (Chennai US consulate) ಅಧಿಕಾರ ವಹಿಸಿಕೊಂಡಿದ್ದಾರೆ. ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಅಮೆರಿಕದ ಹಿತಾಸಕ್ತಿಗಳನ್ನು ಗಮನಿಸುವ ಮತ್ತು ಭಾರತ ಹಾಗು ಅಮೆರಿಕದ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡಲಿದ್ದಾರೆ. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಕಾನ್ಸಲ್‌ ಜನರಲ್‌ ನೈಶುಲರ್‌…

Read More

ಸ್ನೇಹಿತೆಯ ಲವ್​​ನಲ್ಲಿ ಮಧ್ಯಸ್ಥಿಕೆ: ಗಂಡ ಹೆಂಡ್ತಿ ಗಲಾಟೆ ಸಾವಿನಲ್ಲಿ ಅಂತ್ಯ

ಚಿಕ್ಕಬಳ್ಳಾಪುರ, (ಮಾರ್ಚ್ 09): ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಂಡ ಹಾಗೂ ಹೆಂಡತಿ (Husband And Wife) ಮಧ್ಯೆ ಗಲಾಟೆಯಾಗಿದ್ದು, ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಆರ್.ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ವರಲಕ್ಷ್ಮಿ(25) ಎಂದು ಗುರುತಿಸಲಾಗಿದೆ. ಸ್ನೇಹಿತೆಯ ಪ್ರಿಯಕರ ವರಲಕ್ಷ್ಮಿ ಫೋನ್​ಗೆ ಕರೆ ಮಾಡಿದ್ದ. ಆದ್ರೆ, ಕರೆಯನ್ನು ವರಲಕ್ಷ್ಮಿ ಗಂಡ ಗಂಗರಾಜು ರಿಸಿವ್ ಮಾಡಿದ್ದ. ಬಳಿಕ ಗಂಗರಾಜು ಪ್ರೇಮಿಗಳ ಮದ್ಯೆ ಮದ್ಯಸ್ಥಿಕೆ ವಹಿಸಿಬೇಡ ಎಂದು ಹೆಂಡ್ತಿಗೆ ಬೈದು ಬುದ್ಧಿವಾದ ಹೇಳಿದ್ದಾನೆ. ಆದ್ರೆ, ಅದೇನಾಯ್ತೋ…

Read More

ಸಾವಿರಾರು ಮರಗಳ ಮಾರಣಹೋಮಕ್ಕೆ ಸಜ್ಜಾದ ಸರ್ಕಾರ?: ಪರಿಸರ ವಾದಿಗಳಿಂದ ತೀವ್ರ ವಿರೋಧ

ಬೆಂಗಳೂರು, ಮಾರ್ಚ್​ 09: ಅಭಿವೃದ್ಧಿಯ ಹೆಸರಲ್ಲಿ ಪರಿಸರದ ನಾಶದಿಂದಾಗಿ ಪ್ರಾಕೃತಿಕ ಸಮತೋಲನ ಹಾಳಾಗಿ ಈಗಾಗಲೇ ಸಾಲು ಸಾಲು ಸಂಕಷ್ಟಗಳನ್ನು ಜನ ಅನುಭವಿಸುತ್ತಿದ್ದಾರೆ. ಪರಿಸರವನ್ನು ಉಳಿಸುವ ಸಲುವಾಗಿ ಅದೆಷ್ಟೋ ಸಂಘ-ಸಂಸ್ಥೆಗಳು ಗಿಡಗಳನ್ನು ನೆಡುವ ಜೊತೆಗೆ ಪರಿಣಾಮಕಾರಿ ಕೆಲಸಗಳನ್ನು ಮಾಡುತ್ತಿವೆ. ಪರಿಸರ ನಾಶದಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈಹಾಕಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಅಂತಾರಾಷ್ಟ್ರೀಯ ಕನ್ವೆನ್ಷನ್ ಹಾಲ್ ಹೆಸರಲ್ಲಿ ಸಾವಿರಾರು ಮರಗಳ ಮಾರಾಣಹೋಮಕ್ಕೆ ಸರ್ಕಾರ ಸಜ್ಜಾಗಿದೆ ಎಂಬ ವಿಚಾರ ಹರಿದಾಡಿದ್ದು, ಈ ಬಗ್ಗೆ ಪರಿಸರ…

Read More