ಮನೆಯಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಎಸೆದು ಹೋದ ಪಾಪಿಗಳು
ಛತ್ತೀಸ್ಗಢ, ಮಾರ್ಚ್ 09: ರಾತ್ರಿ ಮನೆಯಲ್ಲಿ ಮಲಗಿದ್ದ ಆರು ವರ್ಷದ ಬಾಲಕಿ(Girl)ಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಎಸೆದು ಹೋಗಿರುವ ಘಟನೆ ಛತ್ತೀಸ್ಗಢದ ಹಳ್ಳಿಯೊಂದರಲ್ಲಿ ನಡೆದಿದೆ. ಮಧ್ಯರಾತ್ರಿ ಹೊಲವೊಂದರಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಾರ್ಚ್ 6ರಂದು ರಾತ್ರಿ ಕಂಕೇರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಮನೆಯಲ್ಲಿ ಪೋಷಕರ ಪಕ್ಕದಲ್ಲಿ ಮಲಗಿದ್ದಾಗ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಇಬ್ಬರು ಯುವಕರು ಕುಡಿದ ಮತ್ತಿನಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಬಂದಿರಬಹುದು ಬಳಿಕ ಅಲ್ಲಿ ನಡೆದಿದ್ದೇ ಬೇರೆ ಎಂದಿದ್ದಾರೆ. ಆರೋಪಿಗಳಾದ…