Headlines

ನಮ್ಮ ಮೆಟ್ರೋ : ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್ – Kannada News | Kannada activist vatal nagaraj deadline March 7th to BMRCL

ಬೆಂಗಳೂರು, (ಫೆಬ್ರವರಿ 09): ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಇಂದು (ಫೆಬ್​ರವರಿ 09) ಬೆಂಗಳೂರಿನ ಡಾ. ಬಿಆರ್ ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. ಮೆಟ್ರೋ ದರ ಏರಿಕೆ ಮಾಡಿ ಪ್ರಾಯಾಣಿಕರ ಹೊರೆಯನ್ನ ಹೆಚ್ಚು ಮಾಡಿ ಕನ್ನಡಿಗರನ್ನ ಕೆರಳುವಂತೆ ಮಾಡಿದೆ. ಈ ಕೂಡಲೇ ಮೆಟ್ರೋ ದರ ಏರಿಕೆಯನ್ನು ಹಿಂಪಡೆಯಬೇಕು,ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಇಲ್ಲವಾದರೆ ನಾವು ಬೀದಿಗೆ ಇಳಿಯುತ್ತೇವೆ. ಮಾರ್ಚ್ 7ರವರೆಗೆ…

Read More

‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ – Kannada News | Do Not call me a hero I am just an artist Says Gilli Nata In Super Hit Movie Event

ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಅವರು ‘ಸೂಪರ್ ಹಿಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಗೆ ಅವರು ಕೂಡ ಆಗಮಿಸಿದ್ದರು. ಅವರು ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ನಾಯಕ ನಟ ಎಂದು ಅವರನ್ನು ಕರೆಯಲಾಯಿತು. ‘ದಯವಿಟ್ಟು ನಾಯಕ ನಟ ಎಂದು ಕರೀಬೇಡಿ ಭಯ ಆಗುತ್ತದೆ. ನಾನು ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದೇನೆ ಅಷ್ಟೇ’ ಎಂದು ಗಿಲ್ಲಿ ನಟ ಹೇಳಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

ತಮ್ಮದೇ ಸಿನಿಮಾ ಪ್ರಚಾರಕ್ಕೆ ಗಿಲ್ಲಿ ನಟ ಯಾಕೆ ಹೋಗಿಲ್ಲ? ಕೊನೆಗೂ ಸಿಕ್ತು ಉತ್ತರ – Kannada News | Gilli Nata reaction to Sarkari Shale H8 movie complaint against him in KFCC

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಿಂದ ಗಿಲ್ಲಿ ನಟ ಪಡೆದ ಜನಪ್ರಿಯತೆ ಅಪಾರ. ಆ ರಿಯಾಲಿಟಿ ಶೋಗೆ ಹೋಗುವುದಕ್ಕೂ ಮುನ್ನವೇ ಗಿಲ್ಲಿ ಅವರು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಈಗ ಆ ಸಿನಿಮಾಗಳ ಬಗ್ಗೆ ಟಾಕ್ ಶುರು ಆಗಿದೆ. ಗಿಲ್ಲಿ ನಟ (Gilli Nata) ಅಭಿನಯದ ‘ಸರ್ಕಾರಿ ಶಾಲೆ ಹೆಚ್​8’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಆ ಚಿತ್ರದಲ್ಲಿ ಗಿಲ್ಲಿ ಅವರಿಗೆ ಒಂದು ಪಾತ್ರವಿದೆ. ಆದರೆ ಸಿನಿಮಾದ ಪ್ರಚಾರಕ್ಕೆ ಗಿಲ್ಲಿ ನಟ ಬಂದಿಲ್ಲ ಎಂದು…

Read More

PSI ಬಳಿಕ ಆರ್ಮಿ ಪರೀಕ್ಷೆಯಲ್ಲೂ ಕಳ್ಳಾಟ: ಎಲೆಕ್ಟ್ರಾನಿಕ್ ಡಿವೈಸ್​​ ಪತ್ತೆ – Kannada News | Army Group C Exam Cheating: 18 Candidates inquiry by Bengaluru Halasuru Police Probe

ಬೆಂಗಳೂರು, ಫೆಬ್ರವರಿ 09: ಆರ್ಮಿ ಗ್ರೂಪ್ ಸಿ ಹುದ್ದೆ ಪರೀಕ್ಷೆ (Army Group C exam) ವೇಳೆ ಕಳ್ಳಾಟ ಆರೋಪ ಹಿನ್ನೆಲೆ 18 ಪರೀಕ್ಷಾರ್ಥಿಗಳನ್ನು (examinee) ಕರೆತಂದ ಬೆಂಗಳೂರಿನ ಹಲಸೂರು ಠಾಣಾ ಪೊಲೀಸರು ವಿಚಾರಣೆ ಮಾಡಿದ್ದಾರೆ. ಫೆಬ್ರವರಿ 08ರಂದು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆದಿತ್ತು. ಈ ವೇಳೆ ಮೊಬೈಲ್, ಎಲೆಕ್ಟ್ರಿಕ್ ಡಿವೈಸ್ ಬಳಸಿ ನಕಲು ಮಾಡಿರುವ ಆರೋಪ ಕೇಳಿಬಂದಿದೆ. ಮೂರು ಮೊಬೈಲ್ ಹಾಗೂ ಎಲೆಕ್ಟ್ರಿಕ್ ಡಿವೈಸ್​​ ಜಪ್ತಿ ಮಾಡಲಾಗಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

Read More

ವಾರಾಣಸಿಯಲ್ಲಿ ಬುಲ್ಡೋಜರ್ ದಾಳಿ ಖಂಡಿಸಿ ತನ್ನ ಅಂಗಡಿಗೆ ತಾನೇ ಬೆಂಕಿ ಹಚ್ಚಿದ ವ್ಯಾಪಾರಿ – Kannada News | Man Sets his own Shop Ablaze Pours Petrol On Himself Amid Bulldozer Action begins In Varanasi

ವಾರಾಣಸಿ, ಫೆಬ್ರವರಿ 9: ಉತ್ತರ ಪ್ರದೇಶದ ವಾರಾಣಸಿಯ (Varanasi) ದಾಲ್ಮಂಡಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಬುಲ್ಡೋಜರ್ ಬಳಸಿ ಮನೆಗಳನ್ನು ಕೆಡವಲು ಪ್ರಾರಂಭಿಸಿದೆ. ಇಂದು, ಪುರಸಭೆ ಗುರುತಿಸಿದ ಶಿಥಿಲಗೊಂಡ ಮನೆಗಳಲ್ಲಿ 21 ಮನೆಗಳನ್ನು ನೆಲಸಮ ಮಾಡಲಾಗಿದೆ. ಇದು ಒಂದೇ ದಿನದಲ್ಲಿ ದಾಲ್ಮಂಡಿಯಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆಯಾಗಿದೆ. ಇದನ್ನು ಖಂಡಿಸಿ ಸ್ಥಳೀಯ ಅಂಗಡಿಯವರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಆಡಳಿತ ಅಧಿಕಾರಿಗಳಿಂದ 10 ದಿನಗಳ ಕಾಲಾವಕಾಶ ಕೋರುತ್ತಿದ್ದಾರೆ. ಆದರೂ ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಹೀಗಾಗಿ, ಕಾರ್ಯಾಚರಣೆಯ ಸಮಯದಲ್ಲಿ ಅಂಗಡಿ…

Read More

‘ಸ್ಪಿರಿಟ್’ ಸಿನಿಮಾದಿಂದ ಪ್ರಕಾಶ್ ರಾಜ್ ಹೊರಬಂದಿಲ್ಲ; ಸ್ಪಷ್ಟನೆ ನೀಡಿದ ನಟ – Kannada News | Prakash Raj dismissed rumours of his exit from Spirit movie ft Prabhas

ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ‘ಸ್ಪಿರಿಟ್’ (Spirit) ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪ್ರಭಾಸ್ ನಟನೆಯ ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಜನರಿಗೆ ಗೊಂದಲ ಮೂಡಿದೆ. ಈ ಮೊದಲು ನಾಯಕಿ ಆಗಿದ್ದ ದೀಪಿಕಾ ಪಡುಕೋಣೆ ಅವರು ಚಿತ್ರತಂಡದಿಂದ ಹೊರನಡೆದರು. ಆ ಬಳಿಕ ತೃಪ್ತಿ ದಿಮ್ರಿ ಅವರನ್ನು ಆಯ್ಕೆ ಮಾಡಲಾಯಿತು. ಈಗ ‘ಸ್ಪಿರಿಟ್’ ಸಿನಿಮಾದಿಂದ ಹಿರಿಯ ನಟ ಪ್ರಕಾಶ್ ರಾಜ್ (Prakash Raj) ಅವರು ಹೊರ ನಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅದಕ್ಕೆ ಈಗ ಸ್ವತಃ ಪ್ರಕಾಶ್…

Read More

ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ – Kannada News | KL Rahul Century Powers Karnataka to Ranji Semis vs Mumbai

ರಣಜಿ ಟ್ರೋಫಿಯ ನಾಲ್ಕನೇ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕರ್ನಾಟಕ ತಂಡದ ಪರ ಕೆಎಲ್ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಸಂಕಷ್ಟದಿಂದ ತಂಡಕ್ಕೆ ನೆರವಾದರು. ಎರಡನೇ ಇನ್ನಿಂಗ್ಸ್​ನಲ್ಲಿ 130 ರನ್‌ ಬಾರಿಸಿದ ರಾಹುಲ್, ಈ ಶತಕದೊಂದಿಗೆ ಕರ್ನಾಟಕ ತಂಡದ ಗೆಲುವನ್ನು ಖಚಿತಪಡಿಸಿದರು. ಮುಂಬೈ ನೀಡಿದ 325 ರನ್‌ಗಳ ಗುರಿಯನ್ನು ಬೆನ್ನಟ್ಟಿ ಕರ್ನಾಟಕ 4 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದು ಕೆಎಲ್ ರಾಹುಲ್ ಪ್ರಥಮ ದರ್ಜೆ ವೃತ್ತಿಜೀವನದ…

Read More

Chanakya Niti: ಈ ರೀತಿಯ ಜನರಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Never help such people, it’s better to stay away from them

ಸಹಾಯ (help) ಮಾಡುವುದು ಒಳ್ಳೆಯ ಗುಣ. ಹೌದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ. ಆದರೆ ಇಂತಹ ಕೆಲವೊಂದಿಷ್ಟು ಜನರಿಗೆ ಯಾವುದೇ ಕಾರಣಕ್ಕೂ ಸಹಾಯ ಮಾಡಬಾರದು ಅಂತಹ ಜನರಿಂದ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡಿದ್ದಾರೆ. ಚಾಣಕ್ಯರು ಹೇಳುವಂತೆ ಯಾವ ರೀತಿಯ ಜನರಿಗೆ ಸಹಾಯ ಮಾಡಬಾರದು, ಅಂತಹ ಜನರಿಂದ ಯಾವ ಕಾರಣಕ್ಕಾಗಿ ದೂರವಿರಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ. ಇಂತಹ ಜನರಿಗೆ ಸಹಾಯ ಮಾಡಬಾರದು: ಮೂರ್ಖ ವ್ಯಕ್ತಿ: ಆಚಾರ್ಯ ಚಾಣಕ್ಯರು ಮೂರ್ಖ ವ್ಯಕ್ತಿಯಿಂದ ಆದಷ್ಟು…

Read More

ಕಮಲಾಕರ ಭಟ್​​​ಗೆ ಮತ್ತೋರ್ವ ಮಹಿಳೆ, ಪಡ್ಡೆ ಹುಡುಗರ ಜತೆ ಸುಚಿತ್ರಾ: ಇಬ್ಬರ ಕಮದಾಟ, ಕಳ್ಳಾಟ ಬಯಲಿಗೆ – Kannada News | Siddapura Vasanth Naik Murder Case: reveals Astrologer kamalakara bhat And Lover suchitra illicit relationship With Others

ಕಾರವಾರ, (ಫೆಬ್ರವರಿ 09): ಸಿದ್ದಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣದ (Vasanth Naik Murder Case) ರೂವಾರಿಗಳಾದ ಕಮಲಾಕರ ಭಟ್ (Kamalakar Bhat) ಮತ್ತು ಸುಚಿತ್ರ (Sucitra) ಗ್ಯಾಂಗ್ ಅಂದರ್ ಆಗಿ ಬರೋಬ್ಬರಿ ಇವತ್ತು ಏಳು ದಿನ. ಈ ‌ನಡುವೆ ಇಬ್ಬರ ಕಳ್ಳಾಟದ ಆಡಿಯೋ, ಪೊಟೋಗಳು ಒಂದೊಂದೆ ಆಗಿ ರಿವೀಲ್ ಆಗುತ್ತಿವೆ. ಹೌದು.. ರೀಲ್ಸ್ ರಾಣಿ ಸುಚಿತ್ರಳ ನವಟಂಕಿ ಆಟಗಳು ಒಂದೆರಡಲ್ಲ, ಇದರ‌ ಬಲೆಯಲ್ಲಿ ಬಿದ್ದು ಮೋಸ‌ಹೋದ‌ ಅದೆಷ್ಟೋ ಯುವಕರ ಗುಂಪೇ ಇದೆ. ಆದ್ರೆ ಮರ್ಯಾದೆಗೆ ಅಂಜಿ…

Read More

ಮೊಡವೆಗಳು ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣವೇನು ಗೊತ್ತಾ? ಅವುಗಳನ್ನು ತಡೆಯಲು ಈ ರೀತಿ ಮಾಡಿ – Kannada News | Stop Acne Breakouts: Simple Skincare Hacks

ಇಂದಿನ ಒತ್ತಡದ ಜೀವನ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಅನಿಯಮಿತ ದಿನಚರಿ, ಮೊದಲು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ತಡರಾತ್ರಿ ಎಚ್ಚರವಾಗಿರುವುದು, ಹೆಚ್ಚು ಜಂಕ್ ಫುಡ್ ಸೇವಿಸುವುದು, ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ಮಾನಸಿಕ ಒತ್ತಡ ಸೇರಿದಂತೆ ನಾನಾ ರೀತಿಯ ಕಾರಣಗಳು ಚರ್ಮದ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ರೀತಿಯ ಅಭ್ಯಾಸಗಳಿಂದ ಮುಖದ ಮೇಲೆ ಆಗಾಗ ಮೊಡವೆಗಳು (Acne) ಕಾಣಿಸಿಕೊಳ್ಳುತ್ತದೆ, ಇದು ಯುವಕರು ಮತ್ತು ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದ್ದರೂ ಕೂಡ ಇದನ್ನು ನಿರ್ಲಕ್ಷ್ಯ ಮಾಡುವುದು…

Read More