Chikkaballapur: ಕುಡಿದ ಅಮಲಿನಲ್ಲಿ ಕದಿಯಲು ಹೋದ ಮನೆಯಲ್ಲೇ ಬೆಚ್ಚಗೆ ಮಲಗಿದ ಕಳ್ಳ! – Kannada News | Drunk Thief Naps in Stolen House: Chikkaballapur’s Bizarre Burglary
ಚಿಕ್ಕಬಳ್ಳಾಪುರ, ಫೆಬ್ರವರಿ 09: ಕಳ್ಳತನಕ್ಕೆ ಹೋಗೋ ಖದೀಮರು ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಅಖಾಡಕ್ಕಿಳಿಯುತ್ತಾರೆ. ಮನೆಯಲ್ಲಿ ಯಾರಿದ್ದಾರಾ? ಇಲ್ಲವಾ? ಎನ್ನುವ ಮಾಹಿತಿಗಳ ಸಂಗ್ರಹದ ಜೊತೆ ಯಾವ ಸಮಯ ಕಳ್ಳತನಕ್ಕೆ ಸೂಕ್ತ ಎಂಬಿತ್ಯಾದಿ ತಮ್ಮದೇ ಲೆಕ್ಕಾಚಾರಗಳನ್ನು ಹಾಕಿಕೊಂಡು ರಾಬರಿ ನಡೆಸುವ ಅದೆಷ್ಟೋ ಪ್ರಕರಣಗಳ ಬಗ್ಗೆ ನಾವು ಕೇಳಿದ್ದೇವೆ. ಒಂದೇ ಒಂದು ಸಾಕ್ಷಿಯೂ ಪೊಲೀಸರಿಗೆ ಸಿಗದಂತೆ ಎಸ್ಕೇಪ್ ಆಗುವ ಘಟನೆಗಳ ಬಗ್ಗೆಯೂ ತಿಳಿದಿದ್ದೇವೆ. ಆದ್ರೆ ಇಲ್ಲೊಬ್ಬ ಖದೀಮ ಎಣ್ಣೆ ನಶೆಯಲ್ಲಿ ಕಳ್ಳತನಕ್ಕೆಂದು ಮನೆಗೆ ನುಗ್ಗಿದ್ದ ವೇಳೆ ನಿದ್ದೆ ಬಂದ ಕಾರಣ ಅಲ್ಲೇ…