Headlines

Video: ಮೈಸೂರಿನ ಬೀದಿಯಲ್ಲಿ ಬಿರಿಯಾನಿ ಸವಿದು ಸ್ಥಳೀಯರ ಆತಿಥ್ಯಕ್ಕೆ ಮನಸೋತ ವಿದೇಶಿಗ – Kannada News | Mysore: A foreigner was delighted with the hospitality after tasting free biryani on the side of the road in Mysore.

ಮೈಸೂರು, ಮಾರ್ಚ್ 01: ಭಾರತಕ್ಕೆ ಬರುವ ವಿದೇಶಿಗರು (Foreigners) ಇಲ್ಲಿನ ಪ್ರವಾಸಿ ತಾಣಗಳು, ವಿವಿಧ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ. ಆಚಾರ ವಿಚಾರವನ್ನು ಇಷ್ಟ ಪಟ್ಟು ಇಲ್ಲೇ ಸೆಟಲ್ ಆಗ್ತಾರೆ.  ಅಷ್ಟೇ ಅಲ್ಲದೇ ಭಾರತೀಯರ ಒಳ್ಳೆಯ ಮನಸ್ಸಿಗೆ ಹಾಗೂ ಅತಿಥಿ ಸತ್ಕಾರಕ್ಕೆ ಮನಸೋಲುವುದಿದೆ. ಇದೀಗ ಭಾರತಕ್ಕೆ ಭೇಟಿ ನೀಡಿದ ವಿದೇಶಿಗರೊಬ್ಬರು ಹಂಚಿಕೊಂಡ ಹೃದಯಸ್ಪರ್ಶಿ ಅನುಭವವು ಎಲ್ಲರ ಗಮನ ಸೆಳೆದಿದೆ. ಮೈಸೂರಿನ (Mysore) ಬೀದಿಗಳಲ್ಲಿ ನಡೆದುಕೊಂಡು ಹೋಗುವಾಗ ವಿದೇಶಿಗರೊಬ್ಬರು ಅನಿರೀಕ್ಷಿತ ಕ್ಷಣವನ್ನು ಸೆರೆ ಹಿಡಿದ್ದಾರೆ. ಉಚಿತವಾಗಿ ಬಿರಿಯಾನಿ ನೀಡಿದ್ದು,…

Read More

ಚಿತ್ರದುರ್ಗ ಜಿಲ್ಲಾಡಳಿತ ಭವನ ವಿವಾದ: ಅವೈಜ್ಞಾನಿಕ ಕಟ್ಟಡವೆಂದು ರಿಜೆಕ್ಟ್; ಕೋಟ್ಯಂತರ ರೂ ನೀರಲ್ಲಿ ಹೋಮ – Kannada News | Chitradurga Admin Building Row: Rejected Site, New Plan Sparks Environmental Clash

ಚಿತ್ರದುರ್ಗ, ಮಾರ್ಚ್​​ 01: ಚಿತ್ರದುರ್ಗದಲ್ಲಿ (Chitradurga) ನೂತನ ಜಿಲ್ಲಾಡಳಿತ ಭವನ ಆಗಬೇಕೆಂಬುದು ದುರ್ಗದ ಜನರ ಬಹು ಕಾಲದ ಕನಸು. ಹಾಗಾಗಿ ಕಣಿವೆ ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ಕಟ್ಟಡವೇನೋ ನಿರ್ಮಾಣವಾಗಿದೆ. ಆದರ  ಉದ್ಘಾಟನೆಗೂ ಮುನ್ನವೇ ಅವೈಜ್ಞಾನಿಕ ಕಟ್ಟಡ ಎಂಬ ಕಾರಣಕ್ಕೆ ಜಿಲ್ಲಾಡಳಿತವೇ ತಿರಸ್ಕರಿಸಿ ಮಾಡಿದ್ದು, ಬೇರೆಡೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಆ ಮೂಲಕ ಕೋಟ್ಯಂತರ ರೂ ನೀರಲ್ಲಿ ಹೋಮ ಮಾಡಿದಂತಾಗಿದೆ. ಸದ್ಯ ಹೊಸ ವಿವಾದವೊಂದು ಸೃಷ್ಟಿ ಆಗಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ಒಂದೇ ಸೂರಿನಡಿ ಎಲ್ಲಾ ಕಚೇರಿಗಳು ಇರುವಂತ ಜಿಲ್ಲಾಡಳಿತ…

Read More

IND vs WI T20 WC Live Score: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ – Kannada News | India vs West Indies T20 World Cup 2026 Live Cricket Score IND vs WI Today Match at Eden Gardens Kolkata Live Cricket Score and Updates in Kannada

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯವು ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ ಏಕೆಂದರೆ ಈ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸುತ್ತದೋ ಆ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಸೋತ ತಂಡದ ಪ್ರಯಾಣ ಇಲ್ಲಿಗೆ ಅಂತ್ಯವಾಗುತ್ತದೆ. ಹೀಗಾಗಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನೀಡುವುದನ್ನು ನಿರೀಕ್ಷಿಸಲಾಗಿದೆ. Source link

Read More

ಪಾಕಿಸ್ತಾನ ಆಯ್ತು, ಇರಾನ್ ದೇಶಕ್ಕೂ ಕೈಕೊಟ್ಟಿತಾ ಚೀನಾದ ಏರ್ ಡಿಫೆನ್ಸ್ ಸಿಸ್ಟಂ? – Kannada News | China’s air defence system HQ 9B in Iran allegedly failed to stop US air strikes

ನವದೆಹಲಿ, ಮಾರ್ಚ್ 1: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್​ನಿಂದ ವ್ಯಾಪಕ ಮಿಲಿಟರಿ ದಾಳಿ ಆಗಿದೆ. ಇರಾನ್ ಸರ್ವೇಚ್ಚ ನಾಯಕ ಆಯತುಲ್ಲಾ ಅಲಿ ಖಮೇನೀ (Ayatollah Ali Khamenei) ಸೇರಿದಂತೆ 200ಕ್ಕೂ ಹೆಚ್ಚು ಜನರು ದಾಳಿಯಲ್ಲಿ ಹತರಾಗಿದ್ದಾರೆ. ಈ ಮಧ್ಯೆ ಚೀನಾದ ಎಚ್​ಕ್ಯೂ-9ಬಿ (HQ-9B) ಎನ್ನುವ ಏರ್ ಡಿಫೆನ್ಸ್ ಸಿಸ್ಟಂನ ಸುದ್ದಿ ಚಾಲನೆಗೆ ಬಂದಿದೆ. ಸುದ್ದಿಯ ಪ್ರಕಾರ, ಇರಾನ್ ದೇಶ ಇತ್ತೀಚೆಗಷ್ಟೇ ಚೀನಾದ ಎಚ್​ಕ್ಯೂ-9ಬಿ ಅನ್ನು ಪಡೆದಿತ್ತು ಎನ್ನಲಾಗಿದೆ. ಇದು ನಿಜವೇ ಆದಲ್ಲಿ ಚೀನಾಗೆ ಮುಜುಗರ ತರಬಹುದಾದಂತಹ…

Read More

ನಿರ್ಮಾಣ ಸಂಸ್ಥೆಗೆ ದಾಖಲೆಯ 10 ಲಕ್ಷ ಕೋಟಿ ಆಫರ್, ಓಕೆ ಆಗುತ್ತಾ ಡೀಲ್? – Kannada News | Netflix walks away from Warner Bros deal paramount wins 111 billion bid details in Kannada

ಹಾಲಿವುಡ್‌ನ (Hollywood) ಅತಿದೊಡ್ಡ ವ್ಯವಹಾರವೊಂದು ನಡೆಯುತ್ತಿದೆ. ಕಳೆದ ಕೆಲ ತಿಂಗಳುಗಳಿಂದಲೂ ಹಾಲಿವುಡ್​​ನ ಸಿನಿಮಾ ಪ್ರೇಮಿಗಳು, ದೊಡ್ಡ ಸಿನಿಮಾ ಉದ್ಯಮಿಗಳು, ತೆರಿಗೆ ಇಲಾಖೆಯವರು ಇನ್ನೂ ಹಲವು ಕ್ಷೇತ್ರದವರು ಈ ವ್ಯವಹಾರದ ಮೇಲೆ ಕಣ್ಣಿಟ್ಟಿದ್ದಾರೆ. ಹಾಲಿವುಡ್​ನ ಅತ್ಯಂತ ಯಶಸ್ವಿ, ಜನಪ್ರಿಯ ಮತ್ತು ಹಳೆಯ ನಿರ್ಮಾಣ ಸಂಸ್ಥೆಯಾದ ವಾರ್ನರ್ಸ್ ಬ್ರದರ್ಸ್​​ ನ ಮಾರಾಟ ಆಗಲಿಕ್ಕಿದೆ. ನೆಟ್​​ಫ್ಲಿಕ್ಸ್​ ಸೇರಿದಂತೆ ಕೆಲವು ದೊಡ್ಡ ನಿರ್ಮಾಣ ಸಂಸ್ಥೆಗಳು, ಉದ್ಯಮಪತಿಗಳು ಈ ನಿರ್ಮಾಣ ಸಂಸ್ಥೆಯ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಆದರೆ ಇದೀಗ ಈ ವ್ಯವಹಾರದಲ್ಲಿ ಭಾರಿ ದೊಡ್ಡ…

Read More

ನಿಲ್ಲದ ಮಾನವ-ಆನೆ ಸಂಘರ್ಷ: ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ, ಭುಗಿಲೆದ್ದ ಆಕ್ರೋಶ – Kannada News | Kodagu Tragedy: Wild Elephant Kills PUC Student; Human Elephant Conflict Escalates

ಕೊಡಗು, ಮಾರ್ಚ್​​ 01: ಆ ವಿದ್ಯಾರ್ಥಿನಿ ಈಗಷ್ಟೇ ಪಿಯುಸಿ ಪರೀಕ್ಷೆ ಬರೆದಿದ್ದಳು. ಇನ್ನೆರಡು ತಿಂಗಳು ರಜೆಯನ್ನ ಆರಾಮವಾಗಿ ಕಳೆಯುವ ಆಸೆಯಲ್ಲಿದ್ದಳು. ನಿನ್ನೆ ಕೂಡ ಅಪ್ಪ-ಅಮ್ಮನ ಜೊತೆಗೆ ಬೇಗ ಮನೆ ಸೇರುವ ಆಸೆಯಲ್ಲಿದ್ದಳು. ಆದರೆ ಕಾಡಾನೆ (Elephant) ರೂಪದಲ್ಲಿ ಬಂದ ಯಮರಾಯ ಆ ಮುಗ್ಧ ಯುವತಿಯನ್ನ ಬಲಿ (death) ಪಡೆದಿದೆ. ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಘಟನೆ ನಡೆದಿದೆ. ಕ್ಷಣಾರ್ಧದಲ್ಲಿ ವಿದ್ಯಾರ್ಥಿನಿಯ ಜೀವ ತೆಗೆದ ಕಾಡಾನೆ ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಾರಕಕ್ಕೇರಿದೆ. ಕಾಡಾನೆ ದಾಳಿಗೆ…

Read More

185 ರನ್‌ಗಳಿಂದ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ; ಹೀಲಿಗೆ ಸ್ಮರಣೀಯ ವಿದಾಯ – Kannada News | India Women’s ODI Series Loss: Australia Sweeps 3 0, Healy Bids Farewell with 158

ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಿಶ್ವ ಚಾಂಪಿಯನ್ ಭಾರತೀಯ ಮಹಿಳಾ ತಂಡ ಹೀನಾಯವಾಗಿ ಸೋತಿದೆ. ಇಡೀ ಸರಣಿಯಲ್ಲಿ ಪಾರುಪತ್ಯ ಸಾಧಿಸಿದ ಆತಿಥೇಯ ಆಸ್ಟ್ರೇಲಿಯಾ, ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಮಾರ್ಚ್ 1 ರ ಭಾನುವಾರ ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 409 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 224 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನು…

Read More

ಫಾರೂಕ್ ಸನದಿ ಕೊಲೆ ರಹಸ್ಯ ಬಯಲು: ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಹತ್ಯೆಗೈದ ಪ್ರಿಯಕರ – Kannada News | Big Twist To Gadag faruq sanadi Murder Case: Man murder For engagement with His Girl

ಗದಗ, (ಮಾರ್ಚ್ 01): ಜಿಲ್ಲೆಯ ಲಕ್ಷ್ಮೇಶ್ವರ ಹೊರವಲಯದ ಜಮೀನಲ್ಲಿ ಯುವಕ ಫಾರೂಕ್ ಸನದಿ (faruq sanadi Murder Case) ಎನ್ನುವಾತನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿಶ್ವಿತಾರ್ಥ ಮಾಡಿಕೊಂಡಿದ್ದ ಹುಡುಗಿ ಪ್ರಿಯಕರನೇ ಫಾರೂಕ್ ಸನದಿಯನ್ನು ಕೊಲೆ ಮಾಡಿರುವುದು ಎಂದು ಗೊತ್ತಾಗಿದೆ. ಪ್ರಿಯಕರ ದಾವಲಸಾಬ್ ಹಾಗೂ ಸ್ನೇಹಿತ ಮಕ್ಕಬೂಲ್ ಸಾಬ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿಕೊಂಡು ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಹತ್ಯೆ ನಡೆದ 24 ಗಂಟೆಯಲ್ಲಿ ನಾಲ್ಕು…

Read More

ಹಾರ್ಮುಜ್ ಜಲಸಂಧಿಯಲ್ಲಿ ಆಯಿಲ್ ಟ್ಯಾಂಕರ್ ಮೇಲೆ ಇರಾನ್ ದಾಳಿ; ತೈಲ ಹಡಗಿನಲ್ಲಿದ್ದರು 15 ಮಂದಿ ಭಾರತೀಯರು – Kannada News | Oil tanker with 15 Indian crew members attacked at Strait of Hormuz

ಮಸ್ಕಟ್, ಮಾರ್ಚ್ 1: ಓಮನ್​ನ ಡುಕಮ್ ಬಂದರಿನ (Duqm Port) ಮೇಲೆ ಇರಾನ್​ನ ಡ್ರೋನ್ ದಾಳಿ ನಡೆದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಸಾಗಿ ಹೋಗುತ್ತಿದ್ದ ತೈಲ ಹಡಗೊಂದರ ಮೇಲೆ ದಾಳಿಯಾದ ಘಟನೆ ವರದಿಯಾಗಿದೆ. ಆಗ್ನೇಯ ಏಷ್ಯನ್ ದೇಶವಾದ ಪಲಾವ್​ಗೆ ಸೇರಿದ ಆಯಿಲ್ ಟ್ಯಾಂಕರ್ ಓಮನ್​ ಮುಸಂದಮ್ ಬಳಿ ಕಿರಿದಾದ ಸಮುದ್ರ ಮಾರ್ಗದಲ್ಲಿ ಸಾಗುತ್ತಿದ್ದಾಗ ಈ ದಾಳಿಯಾಗಿದೆ. ಆದರೆ, ಅದರ ಮೇಲೆ ಇರಾನ್ ದಾಳಿ ಮಾಡಿದ್ದಾ ಎಂಬುದು ಖಚಿತವಿಲ್ಲ. ಪಲಾವ್ ಬಾವುಟವಿದ್ದ ಮತ್ತು ಸ್ಕೈಲೈಟ್ ಹೆಸರಿನ…

Read More

CBSE Exams Postponed: ಇರಾನ್-ಇಸ್ರೇಲ್ ಸಂಘರ್ಷ; ಈ ರಾಷ್ಟ್ರಗಳಲ್ಲಿ CBSE 10, 12 ನೇ ತರಗತಿ ಪರೀಕ್ಷೆ ಮುಂದೂಡಿಕೆ – Kannada News | CBSE Exams Postponed in Middle East Amid Iran Israel Tensions, 10th and 12th Boards

ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ನಡೆಯಬೇಕಿದ್ದ ಸಿಬಿಎಸ್‌ಇ (Central Board of Secondary Education) 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿರುವ ಸಿಬಿಎಸ್‌ಇ ಮಂಡಳಿ, ಗಲ್ಫ್ ದೇಶಗಳಲ್ಲಿ ಪರೀಕ್ಷೆ ಬರೆಯಲಿದ್ದ ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ನಾಳೆಯಿಂದ(ಮಾರ್ಚ್ 2)  ಆರಂಭವಾಗಬೇಕಿದ್ದ ಪರೀಕ್ಷೆಗಳು ಮಧ್ಯಪ್ರಾಚ್ಯದ ಇರಾನ್, ಬಹ್ರೇನ್, ಕುವೈತ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್…

Read More