ಬೆಂಗಳೂರಿನಲ್ಲಿ ಮೂವರನ್ನು ಬಲಿ ಪಡೆದ ಮಳೆ ನೀರಿನ ಇಂಗು ಗುಂಡಿ – Kannada News | Bengaluru Sump Tragedy: 3 Dead Due to Chemical Fumes in Rainwater Pit
ಬೆಂಗಳೂರು, ಫೆಬ್ರವರಿ 28: ಮಳೆ ನೀರಿನ ಇಂಗು ಗುಂಡಿಗೆ ಮೂರು ಬಲಿ (death) ಆಗಿರುವಂತಹ ಘಟನೆ ನಗರದ ವೈಟ್ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇಗುಲದ ವೃತ್ತದ ಬಳಿ ನಡೆದಿದೆ. ಮುನಿಶಾಮಪ್ಪ(67), ರುದ್ರಕುಮಾರ್(40) ಮತ್ತು ವಿಶ್ವನಾಥ್ ಆಚಾರಿ(24) ಮೃತರು. ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಮಾಲೀಕ ಮುನಿಶಾಮಪ್ಪ 12 ವರ್ಷಗಳ ಹಿಂದೆಯೇ ಇಂಗು ಗುಂಡಿ ನಿರ್ಮಿಸಿದ್ದರೂ ಬಳಸುತ್ತಿರಲಿಲ್ಲ. ಹೀಗಾಗಿ ನೀರಿನಲ್ಲಿ ಬಿದ್ದ ವಸ್ತುಗಳು ಕೊಳೆತು ನಾರುತ್ತಿದ್ದವು. ಕೆಮಿಕಲ್ ಹಾಕಿ ಕ್ಲೀನ್ ಮಾಡಲು ಮುಂದಾಗಿದ್ದರು. ಈ ವೇಳೆ …