Right Hand Blessings: ಬಲಗೈಯಿಂದಲೇ ಏಕೆ ಆಶೀರ್ವಾದ ಮಾಡಬೇಕು? ಜ್ಯೋತಿಶಾಸ್ತ್ರಜ್ಞರು ಹೇಳುವುದೇನು? – Kannada News | Right Hand Blessings: Why Hindu Tradition Favours it for Good Fortune
ಸನಾತನ ಹಿಂದೂ ಸಂಸ್ಕೃತಿಯಲ್ಲಿ ನಮಸ್ಕಾರ ಹಾಗೂ ಆಶೀರ್ವಾದಕ್ಕೆ ವಿಶೇಷ ಮಹತ್ವವಿದೆ. ಗುರುಗಳಿಗೆ, ಹಿರಿಯರಿಗೆ ಮತ್ತು ಸ್ವಾಮಿಗಳಿಗೆ ನಮಸ್ಕರಿಸುವುದು ವಿನಯದ ಸಂಕೇತವಾಗಿದ್ದು, ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ನಮಸ್ಕಾರ ಮಾಡಿದಾಗ, ಅವರ ಆಶೀರ್ವಾದವನ್ನು ಪಡೆದುಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತದೆ. ಈ ಪೂರ್ಣ ಆಶೀರ್ವಾದದಿಂದ ನಮ್ಮ ಕೆಲಸ ಕಾರ್ಯಗಳು ಮತ್ತು ನಿತ್ಯ ಜೀವನದ ಅಡ್ಡಿ ಆತಂಕಗಳು ನಿವಾರಣೆಯಾಗಿ, ಸುಭಿಕ್ಷವಾಗಿ ಎಲ್ಲಾ ಕಾರ್ಯಗಳು ನೆರವೇರುತ್ತವೆ ಎಂದು ನಂಬಲಾಗಿದೆ. ಈ ಆಶೀರ್ವಾದವನ್ನು ಸಾಮಾನ್ಯವಾಗಿ ಬಲಗೈಯಿಂದಲೇ ಏಕೆ ನೀಡಬೇಕು ಎಂಬುದು ಹಲವರ ಪ್ರಶ್ನೆ….