ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ‘ಪಂಚ್’ ಕೋತಿಯನ್ನು ಬಳಸಿಕೊಂಡ ಮುಂಬೈ ಪೊಲೀಸರು – Kannada News | Mumbai Police Turns Viral Monkey Meme Into Helpline Awareness Drive
ಮುಂಬೈ, ಫೆಬ್ರವರಿ 27: ಮುಂಬೈ ಪೊಲೀಸರು ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಜಪಾನ್ ಕೋತಿ ‘ಪಂಚ್’ (Punch)ಅನ್ನು ಬಳಸಿಕೊಂಡಿದ್ದಾರೆ. ಪಂಚ್ ಕೋತಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಇದು ಈಗ ವಿಶ್ವದಲ್ಲೇ ಫೇಮಸ್. ಜಪಾನಿನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಕೋತಿ ಅಲ್ಲಿನ ಉಳಿದ ಕೋತಿಗಳಿಂದ ಚಿತ್ರಹಿಂಸೆ ಅನುಭವಿಸಿತ್ತು. ಅದು ಸದಾ ಗೊಂಬೆಯೊಂದರ ಜತೆಯೇ ಇರುತ್ತಿತ್ತು. ಅದು ಹುಟ್ಟುವಾಗ 600 ಗ್ರಾಂ ಇದ್ದ ಕಾರಣ ಅದರ ತಾಯಿ ಅದನ್ನು ಸಾಕಲಾಗದೆ ಬಿಟ್ಟು ಹೋಗಿತ್ತು. ಅದಾದ ಬಳಿಕ…