ರಿಷಬ್ ಶೆಟ್ಟಿ ವಿವಾಹ ವಾರ್ಷಿಕೋತ್ಸವ: ಪತ್ನಿ ಪ್ರಗತಿ ಶೆಟ್ಟಿಗೆ ಹೊಗಳಿಕೆಯ ಸುರಿಮಳೆ
ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 9 ವರ್ಷ ಕಳೆದಿದೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಿಷಬ್ ಶೆಟ್ಟಿ ಅವರು ಈ ಕೆಳಗಿನ ಸಂದೇಶವನ್ನು ಹಂಚಿಕೊಂಡಿದ್ದಾರೆ. ‘ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು 9 ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ. ಅಲ್ಲಿ ನಲಿವಿದೆ, ನೋವಿದೆ, ನಗುವಿದೆ, ಸರಸ ವಿರಸಗಳಿವೆ.’ ‘ಎಲ್ಲವನ್ನು ತೂಗುವ ಸಮರಸವಿದೆ. ಎಲ್ಲಕ್ಕೂ ಮಿಗಿಲಾಗಿ ಕೊನೆಯಾಗದ ಒಲವಿದೆ. ಆ ಒಲವು…