ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿ; ಟಿವಿ9 ಜೊತೆ ಯುವ ಟೆನಿಸ್ ಆಟಗಾರ್ತಿ ಸೃಷ್ಟಿ ಕಿರಣ್ ಮಾತು – Kannada News | Shristi Kiran: Bengaluru’s 13 Year Old World No. 1 U13 Indian Tennis Star
ಭಾರತಕ್ಕೆ ಹೊಸ ಟೆನಿಸ್ ತಾರೆ ಸಿಕ್ಕಿದ್ದು, ಬೆಂಗಳೂರಿನ 13 ವರ್ಷದ ಸೃಷ್ಟಿ ಕಿರಣ್ 13 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕವನ್ನು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಸೃಷ್ಟಿ ಭಾರತೀಯ ಟೆನಿಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಅಂತರರಾಷ್ಟ್ರೀಯ ಜೂನಿಯರ್ ಟೆನಿಸ್ ಸರ್ಕ್ಯೂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸೃಷ್ಟಿ, ಸತತ ಐದು ಐಟಿಎಫ್ ಜೂನಿಯರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಗ್ವಾಟೆಮಾಲಾದಲ್ಲಿ ನಡೆದ ಐಟಿಎಫ್ ವರ್ಲ್ಡ್ ಟೆನಿಸ್ ಟೂರ್…