Headlines

Video: ಎತ್ತಿನ ಕಾಲು ಒತ್ತಿ ಸೇವೆ ಮಾಡಿದ ಮುದ್ದು ಮಕ್ಕಳು, ವೈರಲ್‌ ಆಯ್ತು ದೃಶ್ಯ – Kannada News | The adorable children who served by pressing the ox’s leg

ಪುಟಾಣಿಗಳು (little kids) ಏನು ಮಾಡಿದ್ರೂ ಕೂಡ ಚಂದನೇ. ಮುದ್ದು ಮಕ್ಕಳು ಮನೆಯ ಸಾಕು ಪ್ರಾಣಿಗಳ ಜತೆಗೆ ತುಂಟಾಟ ಆಡುವುದನ್ನು ನೋಡುವಾಗ ಖುಷಿಯೆನಿಸುತ್ತದೆ. ತನ್ನಮೇಲೆ  ಪ್ರೀತಿ ಕಾಳಜಿ ತೋರುವ ಮುದ್ದು ಮನಸ್ಸಿನ ಮಕ್ಕಳಿಗೆ ಕಾವಲಾಗಿ ನಿಲ್ಲುತ್ತವೆ. ಈ ದೃಶ್ಯ ನೋಡಿದರಂತೂ ಮುಗ್ಧ ಮನಸ್ಸುಗಳ ಶುದ್ಧ ಪ್ರೀತಿಗೆ ನೀವು ಕರಗುವುದು ಖಂಡಿತ. ಪುಟಾಣಿಗಳಿಬ್ಬರೂ ಎತ್ತಿನ ಕಾಲು ಒತ್ತಿ ಸೇವೆ ಮಾಡುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಮುದ್ದು ಮಕ್ಕಳು ಮೂಕ ಪ್ರಾಣಿಗಳ ಮೇಲೆ ಪ್ರೀತಿ…

Read More

ಬಾಗಲಕೋಟೆ ಕಲ್ಲು ತೂರಾಟ ಪ್ರಕರಣ: ಎನ್​ಐಎ ತನಿಖೆಗೆ ಶ್ರೀರಾಮುಲು ಆಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್​​ ಶಾಗೆ ಪತ್ರ – Kannada News | Bagalkote Stone Pelting: Sriramulu Urges NIA Probe for Shivaji Jayanti Incident

ಬಾಗಲಕೋಟೆ, ಫೆ.26: ಜಿಲ್ಲೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆದಿರುವ ಘಟನೆಯ ಬಗ್ಗೆ ಅಕ್ರೋಶದ ವ್ಯಕ್ತಪಡಿಸಿರುವ ಮಾಜಿ ಸಚಿವ ಹಾಗೂ ಸಂಸದ ಬಿ. ಶ್ರೀರಾಮುಲು, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಕಳೆದ ಫೆಬ್ರವರಿ 19 ರಂದು ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಸಾಗುತ್ತಿದ್ದಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಮೆರವಣಿಗೆಯ ಮೇಲೆ…

Read More

ಬ್ರೇಕ್ ಫೇಲ್​ ಆಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ನುಗ್ಗಿದ ಲಾರಿ: ಸಿಕ್ಕ ಸಿಕ್ಕ ವಾಹನಕ್ಕೆಲ್ಲ ಡಿಕ್ಕಿ – Kannada News | Brake Fail Lorry Hits Multiple Vehicles in Bagaluru, North Bengaluru

ದೇವನಹಳ್ಳಿ, ಫೆಬ್ರವರಿ 26: ಬ್ರೇಕ್​​ ಫೇಲ್​​ ಆದ ಪರಿಣಾಮ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನುಗ್ಗಿದ ಲಾರಿಯೊಂದು ಸಿಕ್ಕಿ ಸಿಕ್ಕ ವಾಹನಗಳಿಗೆ ಗುದ್ದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿ ನಡೆದಿದೆ. ಎದುರು ಬರುತ್ತಿದ್ದ ಕಾರುಗಳು, ದ್ವಿಚಕ್ರ ವಾಹನಗಳು ಸೇರಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಲಾರಿ ನಿಂತಿದ್ದು, ಘಟನೆಯ ದೃಶ್ಯ ಕಾರೊಂದರ ಡ್ಯಾಶ್​​ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾರಿ‌ ನುಗ್ಗಿದ ರಭಸಕ್ಕೆ ಎರಡು ಕಾರುಗಳು, 3 ಬೈಕ್​ಗಳು ಜಖಂ ಆಗಿದ್ದು, ವಾಹನಗಳಲ್ಲಿದ್ದ ಎಲ್ಲರೂ ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏರ್​ಪೋರ್ಟ್​ಗೆ ಸಂಪರ್ಕ…

Read More

ಪಿಂಕ್ ಲೈನ್ ಮೆಟ್ರೋ: ಕೋತ್ತನೂರು ಡಿಪೋಗೆ ಮೂರನೇ ರೈಲು ಸೆಟ್ ಆಗಮನ – Kannada News | Pink Line Metro Progress: Testing Begins as Third BEML Train Set Joins Fleet

ಬೆಂಗಳೂರಿನ ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಮಹತ್ವದ ಪ್ರಗತಿ ಕಂಡುಬಂದಿದೆ. ಬಿಇಎಂಎಲ್ ಸಂಸ್ಥೆಯು ತಯಾರಿಸಿರುವ ಮೂರನೇ ಡ್ರೈವರ್​ಲೆಸ್​ ರೈಲು ಸೆಟ್ ಯಶಸ್ವಿಯಾಗಿ ಕೋತ್ತನೂರು ಡಿಪೋವನ್ನು ತಲುಪಿದೆ. ಈ ರೈಲು ಬೋಗಿಗಳು ಪಿಂಕ್ ಲೈನ್ ಯೋಜನೆಯ ಕಾರ್ಯಗತಿಯನ್ನು ಮತ್ತಷ್ಟು ವೇಗಗೊಳಿಸಲಿವೆ. ಈಗಾಗಲೇ ಪಿಂಕ್ ಲೈನ್​ಗೆ ಎರಡು ಡ್ರೈವರ್​ಲೆಸ್​ ರೈಲುಗಳು ಬಂದಿದ್ದು, ಅವುಗಳಲ್ಲಿ ಮೊದಲನೆಯ ರೈಲು ಸೆಟ್‌ನ ಪರೀಕ್ಷಾರ್ಥ ಸಂಚಾರ ಈಗಾಗಲೇ ಆರಂಭವಾಗಿದೆ. ಇದು ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸುವಲ್ಲಿ ಒಂದು ಪ್ರಮುಖ ಹಂತವಾಗಿದೆ. ಪಿಂಕ್ ಲೈನ್ ಮೆಟ್ರೋ ಮಾರ್ಗವು…

Read More

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಇದನ್ನು ಇಲ್ಲಿಗೆ ಬಿಡುವುದಿಲ್ಲ, ಎನ್​ಸಿಇಆರ್​ಟಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ – Kannada News | Supreme Court Slams NCERT Over Judiciary Corruption Chapter: Seeks Accountability

ನವದೆಹಲಿ, ಫೆಬ್ರವರಿ 26: ಎಂಟನೇ ತರಗತಿಯ ವಿದ್ಯಾರ್ಥಿಗಳ ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ಅಧ್ಯಾಯನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್(Supreme Court), ಗುರುವಾರ ಉತ್ತರದಾಯಿತ್ವವನ್ನು ಕೋರಿದೆ. ನಾವು ಆಳವಾದ ತನಿಖೆ ನಡೆಸಲು ಬಯಸುತ್ತೇವೆ. ಯಾರು ಹೊಣೆಗಾರರು ಎಂಬುದನ್ನು ನಾವು ಕಂಡುಹಿಡಿಯಬೇಕು ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದೆ. 32 ಪುಸ್ತಕಗಳು ಮಾರುಕಟ್ಟೆಗೆ ಬಂದಿವೆ ಆದರೆ ಈಗ ಅವುಗಳನ್ನು ಹಿಂಪಡೆಯಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.ಅವರು ಗುಂಡು ಹಾರಿಸಿದರು ಇಂದು…

Read More

ಖಾಲಿ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರದ ಮುಂದಿರುವ ಸವಾಲುಗಳೇನು? ಇಲ್ಲಿದೆ ಮಾಹಿತಿ – Kannada News | Karnataka Job Recruitment: Government Faces Hurdles in Filling 2.84 Lakh Vacant Posts

ಖಾಲಿ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರದ ಮುಂದಿವೆ ಹಲವು ಸವಾಲುImage Credit source: Google ಬೆಂಗಳೂರು, ಫೆಬ್ರವರಿ 26: ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ ಬೃಹತ್​​ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇಮಕಾತಿ ಪ್ರಕ್ರಿಯೆಗಳನ್ನು ಹಂತ ಹಂತವಾಗಿ ಶೀಘ್ರ ನಡೆಸುವ ಭರವಸೆ ಕೊಟ್ಟಿದ್ದಾರೆ. ಕಾಂಗ್ರೆಸ್​​ ನೇತೃತ್ವದ ಸರ್ಕಾರದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಳೆದ 2.5 ವರ್ಷಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ವಿವಿಧ ಇಲಾಖೆಗಳಲ್ಲಿ ಮಾಡಲಾಗಿದೆ. ಹಿಂದಿನ ಬಿಜೆಪಿ…

Read More

‘ವೀರ ಕಂಬಳ’ ಸಿನಿಮಾನಲ್ಲಿ ವೀರೇಂದ್ರ ಹೆಗ್ಗಡೆ ನಟನೆ: ಬೆದರಿಕೆ ಕರೆಗಳು ಬಂದಿದ್ದವು ಎಂದ ನಿರ್ದೇಶಕ ಬಾಬು – Kannada News | Director said he got threat calls because Veerendra Heggade acted in his movie

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರು ‘ವೀರ ಕಂಬಳ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಈ ಸಿನಿಮಾ ಕಂಬಳ ಕ್ರೀಡೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಆದಿತ್ಯ ಸೇರಿದಂತೆ ಹಲವರು ನಟಿಸಿದ್ದಾರೆ. ಸಿನಿಮಾನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಹ ನಟಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ರಾಜೇಂದ್ರ ಸಿಂಗ್ ಬಾಬು, ‘ಕ್ಲೈಮ್ಯಾಕ್ಸ್​​ನಲ್ಲಿ ಸಂದೇಶ ನೀಡುವ ಪಾತ್ರವೊಂದು ಬೇಕಾಗಿತ್ತು, ಆ ಪಾತ್ರ ಬಹಳ ಘನವಾದ ಪಾತ್ರ ಆಗಿರಬೇಕಿತ್ತು, ನನಗೆ ಹೆಗ್ಗಡೆ…

Read More

ಬರೋಬ್ಬರಿ 584 ರನ್​ಗಳಿಸಿದ ಜಮ್ಮು-ಕಾಶ್ಮೀರ: ಕರ್ನಾಟಕದ ಗೆಲುವಿಗೆ ಇದೊಂದೇ ದಾರಿ – Kannada News | Jammu and Kashmir Hammered 584 Runs Against Karnataka in The Ranji Final

ಹುಬ್ಬಳ್ಳಿಯ ಕೆಎಸ್​ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 584 ರನ್​ಗಳಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು-ಕಾಶ್ಮೀರ ಪರ ಆರಂಭಿಕನಾಗಿ ಕಣಕ್ಕಿಳಿದ ಯಾವರ್ ಹಸನ್ 88 ರನ್ ಬಾರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭಂ ಪುಂಡಿರ್ 121 ರನ್​ ಗಳಿಸಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಪರಸ್ ಡೋಗ್ರಾ 70 ರನ್​ಗಳ ಇನಿಂಗ್ಸ್ ಆಡಿದರು. ಮತ್ತೊಂದೆಡೆ ಅಬ್ದುಲ್ ಸಮದ್ 61…

Read More

ಸರ್ಕಾರಿ ಹುದ್ದೆಗಳ ಭರ್ತಿಗೆ ಬಿಜೆಪಿ ಹೋರಾಟದ ಬ್ಯಾನರ್‌ಗಳಲ್ಲಿ ರಾಜ್ಯಾಧ್ಯಕ್ಷರ ಫೋಟೊಗೆ ಕೋಕ್, ಶುರುವಾಯ್ತು ರಾಜಕೀಯ ಚರ್ಚೆ – Kannada News | Dharwad BJP Protest Over Vacant Government Posts Sparks Row as BY Vijayendra’s Photo Missing from Banners

ಧಾರವಾಡ, ಫೆಬ್ರವರಿ 26: ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗಾಗಿ ಫೆಬ್ರವರಿ 24ರಂದು ಧಾರವಾಡದಲ್ಲಿ (Dharwad) ಬಿಜೆಪಿ (BJP) ಆಯೋಜಿಸಿದ್ದ ಪ್ರತಿಭಟನೆ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಉದ್ಯೋಗಾಕಾಂಕ್ಷಿಗಳ ಪರವಾಗಿ ಕರೆ ನೀಡಿದ್ದ ಈ ಹೋರಾಟ ಶ್ರೀನಗರ ವೃತ್ತದಿಂದ ಜಯನಗರ ಮಾರ್ಗವಾಗಿ ಮಿಚಗಿನ್ ಕಂಪೌಂಡ್‌ ವರೆಗೆ ಜಾಥಾ ರೂಪದಲ್ಲಿ ನಡೆದಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಕಡೆಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಇವುಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಫೋಟೊಗಳೇ ಇರಲಿಲ್ಲ ಎಂಬುದು…

Read More

1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು? – Kannada News | British borrowed Rs 35,000 from Indian businessman in 1917, now that family wants money back

ಭೋಪಾಲ್, ಫೆಬ್ರುವರಿ 26: ಮೊದಲ ವಿಶ್ವ ಮಹಾಯುದ್ಧದ (World War I) ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಬ್ರಿಟಿಷ್ ಸರ್ಕಾರಕ್ಕೆ ಭಾರತೀಯ ಉದ್ಯಮಿಯೊಬ್ಬರು ಕೊಟ್ಟಿದ್ದ 35,000 ರೂ ಸಾಲದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಲು ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮಧ್ಯಪ್ರದೇಶದ ಸೀಹೋರ್​ನ (Sehore, Madhya Pradesh) ಈ ಕುಟುಂಬವು 35,000 ರೂ ಸಾಲವನ್ನು ವಾಪಸ್ ಕೇಳಲು ಕಾನೂನು ಮಾರ್ಗಗಳನ್ನು ಅವಲೋಕಿಸುತ್ತಿದ್ದಾರೆ. 1917ರಲ್ಲಿ ಸೇಠ್ ಜುಮ್ಮಾ ಲಾಲ್ ರುದಿಯಾ (Seth Jumma Lal Ruthia) ಅವರು ಸ್ಥಳೀಯ ಬ್ರಿಟಿಷ್…

Read More