SL vs NZ: 6,6,6,6.. ಲಂಕಾ ವಿರುದ್ಧ ಅಬ್ಬರಿಸಿ ವಿಶೇಷ ದಾಖಲೆ ಬರೆದ ಮಿಚೆಲ್ ಸ್ಯಾಂಟ್ನರ್ – Kannada News | Mitchell Santner Rescues NZ with Record Partnership, Reaches 1000 T20I Runs vs SL
ಶ್ರೀಲಂಕಾ ವಿರುದ್ಧ 47 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಮಿಚೆಲ್ ಸ್ಯಾಂಟ್ನರ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1,000 ರನ್‌ಗಳನ್ನು ಪೂರ್ಣಗೊಳಿಸಿದರು. ಸ್ಯಾಂಟ್ನರ್ ತಮ್ಮ ಇನ್ನಿಂಗ್ಸ್‌ನ 26 ನೇ ರನ್ ಗಳಿಸಿದ ತಕ್ಷಣ ಈ ಮೈಲಿಗಲ್ಲು ತಲುಪಿದರು. ಮಿಚೆಲ್ ಸ್ಯಾಂಟ್ನರ್ ಈಗ 132 ಪಂದ್ಯಗಳಿಂದ 88 ಇನ್ನಿಂಗ್ಸ್‌ಗಳಲ್ಲಿ 1,021 ರನ್‌ಗಳನ್ನು ಗಳಿಸಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ 13 ನೇ ನ್ಯೂಜಿಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೂ ಸ್ಯಾಂಟ್ನರ್ ಪಾತ್ರರಾಗಿದ್ದಾರೆ. Source link