ಕಡಲೆಕಾಯಿ ಸಿಪ್ಪೆ ವಿಚಾರಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿ ಮಾರಾಮಾರಿ: ಮೂವರಿಗೆ ಗಾಯ – Kannada News | KSRTC Bus Fight: Groundnut Shells Spark Brawl Between Passengers and Conductor in Chamarajanagar
ಚಾಮರಾಜನಗರ, ಫೆಬ್ರವರಿ 25: ಕಡಲೆಕಾಯಿ ಸಿಪ್ಪೆ ವಿಚಾರಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿ ಮಾರಾಮಾರಿ ನಡೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸರಗೂರು ಬಳಿ ನಡೆದಿದೆ. ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ನಲ್ಲಿ ಪ್ರಯಾಣಿಕರು ಕಡಲೆಕಾಯಿ ಸಿಪ್ಪೆಯನ್ನು ಬಿಸಾಡಿದ್ದಾರೆ. ಇದನ್ನ ನಿರ್ವಾಹಕ ಪ್ರಶ್ನಿಸಿದ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ, ಸರಗೂರು ಬೈಪಾಸ್ ಬಳಿ ನಿರ್ವಾಹಕ ಮತ್ತು ಪ್ರಯಾಣಿಕರ ನಡುವೆ ಬಡಿದಾಟವೇ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದ ಪರಿಣಾಮ ಚಾಮರಾಜನಗರದ ಪ್ರಯಾಣಿಕರಾದ ಫಯಾಜ್ ಅಹ್ಮದ್ ಮತ್ತು ಶಾರಾನ್, ನಿರ್ವಾಹಕ…