ರಾಯರ ಸನ್ನಿಧಿಯಲ್ಲಿ ತಂದೆಗೆ ಗೌರವ ಡಾಕ್ಟರೇಟ್: ಯುವ ರಾಜ್ಕುಮಾರ್ ಫುಲ್ ಖುಷ್ – Kannada News | Yuva Rajkumar reaction after her father Raghavendra Rajkumar gets honorary doctorate in Mantralaya
ಮಂತ್ರಾಲಯದಲ್ಲಿ ನಡೆದ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರಿಗೆ ಗೌರವ ಡಾಕ್ಟರೇಟ್ ಪದವಿ ಪದಾನ ಮಾಡಲಾಗಿದೆ. ಈ ಬಗ್ಗೆ ಅವರ ಪುತ್ರ ಯುವ ರಾಜ್ಕುಮಾರ್ ಮಾತನಾಡಿದ್ದಾರೆ. ‘ಇದಕ್ಕಿಂತ ಇನ್ನೇನೂ ಸಂತೋಷ ಇಲ್ಲ. ನಮ್ಮ ತಾತ ಮಂತ್ರಾಲಯ ಮಹಾತ್ಮೆ ಸಿನಿಮಾ ಮಾಡುವಾಗ ನಮ್ಮ ತಂದೆ ಹುಟ್ಟಿದ್ದು. ಅದಕ್ಕೆ ಅವರಿಗೆ ರಾಘವೇಂದ್ರ ಅಂತ ಹೆಸರು ಇಟ್ಟಿದ್ದು. ಇಂದು ಇಲ್ಲಿ ರಾಯರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಸಿಗುತ್ತಿರುವುದು ಬಹಳ ಸಂತೋಷದ ವಿಷಯ. ರಾಯರ ಬಗ್ಗೆ ನಮ್ಮ ತಾತ…