Video: ನೋಡ ನೋಡುತ್ತಿದ್ದಂತೆ ಮಹಿಳೆಯ ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ ಆನೆ – Kannada News | Woman makes a request to an elephant who threw her hat
ಆನೆಗಳ (elephants) ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲದು. ತನ್ನನ್ನು ಆರೈಕೆ ಮಾಡುವ ವ್ಯಕ್ತಿಗಳ ಜೊತೆಗೆ ಪ್ರೀತಿಯಿಂದ ಗುದ್ದಾಡುತ್ತವೆ. ಕೆಲವೊಮ್ಮೆ ಅತ್ಯಂತ ಸಲುಗೆಯಿಂದ ವರ್ತಿಸುತ್ತವೆ. ಇದೀಗ ಇಂತಹದ್ದೇ ತಮಾಷೆಯೆನಿಸುವ ವಿಡಿಯೋ ವೈರಲ್ ಆಗಿದೆ. ಆನೆಯೊಂದು ಮಹಿಳೆಯ (woman) ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ್ದು, ಆಮೇಲೆ ಆಗಿದ್ದು ನೋಡಿದ್ರೆ ನೀವು ಶಾಕ್ ಆಗ್ತೀರಾ. ಗಜರಾಜನ ಈ ಕ್ಯೂಟ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಎನಿವೇ ಮನ್ಯವಿ (Anyway Manyawi) ಹೆಸರಿನ ಫೇಸ್ಬುಕ್ ಖಾತೆಯಲ್ಲಿ…