ಬರೋಬ್ಬರಿ 4,352 ದಿನಗಳ ಬಳಿಕ ಇತಿಹಾಸ ನಿರ್ಮಿಸಿದ ನೇಪಾಳ – Kannada News | Nepal end 12 year wait in T20 World Cup 2026
ಬರೋಬ್ಬರಿ 4,352 ದಿನಗಳ ಬಳಿಕ ನೇಪಾಳ ತಂಡವು ಟಿ20 ವಿಶ್ವಕಪ್ನಲ್ಲಿ ಪಂದ್ಯ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಬಳಿಕ ಮ್ಯಾಚ್ ಗೆದ್ದ ತಂಡವೆಂಬ ದಾಖಲೆಯೊಂದನ್ನು ನೇಪಾಳ ತನ್ನದಾಗಿಸಿಕೊಂಢಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ 33ನೇ ಪಂದ್ಯದಲ್ಲಿ ನೇಪಾಳ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು. ಈ ಗುರಿಯನ್ನು ನೇಪಾಳ ತಂಡ 19.3…