Headlines

ಮಿತಿಮೀರಿ ನಡೆದುಕೊಂಡ ದರ್ಶನ್ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ – Kannada News | ASI Hit Darshan Fan Over Misbehave in Bangalore RR Nagara

ದರ್ಶನ್ ಅಭಿಮಾನಿಗಳಿಗೆ ಇಂದು (ಫೆಬ್ರವರಿ 16) ವಿಶೇಷ ದಿನ. ಏಕೆಂದರೆ ಅವರ ನೆಚ್ಚಿನ ನಟನ ಜನ್ಮದಿನ. ಈ ವಿಶೇಷ ದಿನಂದು ಬೆಂಗಳೂರಿನ ಆರ್​ಆರ್​ ನಗರದ ಮನೆಗೆ ನುಗ್ಗಲು ದರ್ಶನ್ ಫ್ಯಾನ್ಸ್ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಫ್ಯಾನ್ಸ್ ಮಧ್ಯೆ ಕಿರಿಕ್ ಆಗಿದೆ. ಪೊಲೀಸ್ ಅನ್ನೋದನ್ನು ನೋಡದೆ ತಳ್ಳಿ ಒಳ ನುಗ್ಗಲು ಪ್ರಯತ್ನಿಸಿದ ಅಭಿಮಾನಿಗೆ ಕಪಾಳಮೋಕ್ಷ ಮಾಡಲಾಗಿದೆ. ಕುಡಿದು ಬಂದು ಪದೇ ಪದೇ ಕಿರಿ ಕಿರಿ ಮಾಡಿದ್ದಕ್ಕೆ ಎಎಸ್​​ಐ ಯೋಗ ನರಸಯ್ಯ ರಾಜು ಇಷ್ಟು ಕಠಿಣವಾಗಿ ನಡೆದುಕೊಂಡರು…

Read More

IND vs PAK: ಹೀಗಾದರೆ ಭಾರತ- ಪಾಕ್ ನಡುವೆ ಟಿ20 ವಿಶ್ವಕಪ್​ನಲ್ಲಿ ಮತ್ತೊಂದು ಪಂದ್ಯ – Kannada News | India vs Pakistan T20 World Cup Re Match: Super 8, Semifinal and Final Pathway Explained

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಭಿಮಾನಿಗಳಿಗೆ ಅದೊಂದು ಹಬ್ಬವೇ ಸರಿ. ಆದಾಗ್ಯೂ ಈ ತಂಡಗಳು ಐಸಿಸಿ ಹಾಗೂ ಎಸಿಸಿ ಈವೆಂಟ್​ಗಳಲ್ಲಿ ಮಾತ್ರ ಮುಖಾಮುಖಿಯಾಗುವುದರಿಂದ ವರ್ಷಕ್ಕೆ ಮೂರು ಅಥವಾ ನಾಲ್ಕು ಪಂದ್ಯಗಳು ನಡೆದರೆ ಹೆಚ್ಚು. ಹೀಗಿರುವಾಗ ಒಂದೇ ಈವೆಂಟ್​ನಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗುವುದು ಅಭಿಮಾನಿಗಳ ಪಾಲಿಗೆ ಅದು ಅದೃಷ್ಟವೇ ಸರಿ. ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲೂ (T20 World Cup) ಭಾರತ ಹಾಗೂ ಪಾಕಿಸ್ತಾನ ತಂಡಗಳು ಎರಡು ಬಾರಿ…

Read More

ಭಾರತಕ್ಕೂ ಬಂದ ಆಂಥ್ರೋಪಿಕ್; ಬೆಂಗಳೂರಿನಲ್ಲಿ ಅಂಗಡಿ ತೆರೆದ ಎಐ ಕಂಪನಿ – Kannada News | Anthropic starts its office in Bengaluru, eyes to reek benefits of one of the largest markets

ಬೆಂಗಳೂರು, ಫೆಬ್ರುವರಿ 16: ಎಐ ಸೇವೆಗಳನ್ನು ನೀಡುವ ಆಂಥ್ರೋಪಿಕ್ (Anthropic) ಸಂಸ್ಥೆ ಬೆಂಗಳೂರಿನಲ್ಲಿ ಹೊಸ ಕಚೇರಿ ತೆರೆದಿದೆ. ಇದು ಭಾರತದಲ್ಲಿ ಆಂಥ್ರೋಪಿಕ್​ನ ಮೊದಲ ಕಚೇರಿಯಾಗಿದೆ. ಏಷ್ಯಾದಲ್ಲಿ ಅದರ ಎರಡನೇ ಕಚೇರಿಯಾಗಿದೆ. ಭಾರತದ ಅಗಾಧ ಮಾರುಕಟ್ಟೆ, ವಿಫುಲ ಅವಕಾಶಗಳಿರುವ ಹಿನ್ನೆಲೆಯಲ್ಲಿ ಈ ಅಮೆರಿಕನ್ ಎಐ ಕಂಪನಿ ಬೆಂಗಳೂರಿನಲ್ಲಿ ಕಚೇರಿ ತೆರೆದಿದೆ. ಆಂಥ್ರೋಪಿಕ್​ನ ಸೂಪರ್ ಹಿಟ್ ಎಐ ಉತ್ಪನ್ನಗಳಲ್ಲಿ ಕ್ಲಾಡ್ ಎಐ ಒಂದು. ಇದು ಜನರೇಟಿವ್ ಎಐ ಮಾಡಲ್ ಆದರೂ ಕೋಡಿಂಗ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದಕ್ಕೆ ಖ್ಯಾತಿ ಪಡೆದಿದೆ. ಅದರ…

Read More

ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್: ಮುಸ್ಲಿಮರು ಅಲಂಕಾರ ಮಾಡಿದ್ದಕ್ಕೆ ದೇಗುಲ ಶುದ್ಧೀಕರಣ ಮಾಡಿದ ಹಿಂದೂಗಳು – Kannada News | Kalaburagi Shiva Temple Row: Hindu Groups Purify Premises with Gomutra After Muslim Florist Decoration

ಕಲಬುರಗಿ, ಫೆಬ್ರವರಿ 16: ಹಲಾಲ್ ಕಟ್, ಜಟ್ಕಾ ಕಟ್, ಹಿಜಾಬ್ ವಿವಾದಗಳ ಬಳಿಕ ಇದೀಗ ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್ ಶುರುವಾಗಿದೆ. ಶಿವನ ದೇವಸ್ಥಾನಕ್ಕೆ (Shiva Temple) ಮುಸ್ಲಿಂ ಯುವಕರು (Muslim boys) ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು ಕೆರಳಿ ಕೆಂಡವಾಗಿವೆ. ಮುಸ್ಲಿಮರು ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಗೋಮೂತ್ರದಿಂದ ದೇವಸ್ಥಾನ ಶುದ್ಧೀಕರಣ ಮಾಡುವುದರ ಮ‌ೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಧರ್ಮ ದಂಗಲ್‌ ಶುರು ಕಲಬುರಗಿಯಲ್ಲಿ ಧರ್ಮ ದಂಗಲ್ ಪ್ರಕರಣಗಳು ನಿಲ್ಲುವ ಹಾಗೆ ಕಾಣಿಸುತ್ತಿಲ್ಲ. ನಿನ್ನೆಯಷ್ಟೇ…

Read More

ಹುಡುಗಿಯರು ಹಗ್​ ಮಾಡುವಾಗ ಹುಡುಗರ ಈ ಭಾಗದ ವಾಸನೆ ನೋಡ್ತಾರೆ – Kannada News | Hug Psychology: 7 Things Girls Notice for Deeper Connection and Appeal

ಹುಡುಗಿಯರು ಹಗ್ (ಅಪ್ಪುಗೆ) ಮಾಡುವಾಗ ಕೆಲವು ವಿಷಯಗಳನ್ನು ಅರಿವಿಲ್ಲದೆಯೇ ಗಮನಿಸುತ್ತಾರೆ ಎಂಬುದು ಮನೋವಿಜ್ಞಾನ ಮತ್ತು ದೈನಂದಿನ ಜೀವನದ ಅವಲೋಕನಗಳಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಅಪ್ಪುಗೆ ಎನ್ನುವುದು ಪ್ರೀತಿ ಮತ್ತು ಭದ್ರತೆಯ ಸಂಕೇತ. ಆ ಸಮಯದಲ್ಲಿ ಹುಡುಗಿಯರು ಹೆಚ್ಚಾಗಿ ಗಮನಿಸುತ್ತಾರೆ. ಹಗ್ ಮಾಡುವಾಗ ಹುಡುಗಿಯ ಮುಖವು ಹುಡುಗನ ಭುಜ ಅಥವಾ ಕುತ್ತಿಗೆಯ ಹತ್ತಿರ ಇರುತ್ತದೆ. ಆ ಸಮಯದಲ್ಲಿ ಹುಡುಗನ ದೇಹದಿಂದ ಬರುವ ಆಹ್ಲಾದಕರವಾದ ಪರ್ಫ್ಯೂಮ್ ಅಥವಾ ಸೋಪಿನ ಸುವಾಸನೆಯು ಅವರಿಗೆ ತುಂಬಾ ಇಷ್ಟವಾಗುತ್ತದೆ. ಇದು ಅವರಿಗೆ ಒಂದು ರೀತಿಯ ಸಮಾಧಾನ…

Read More

ಉದ್ಯೋಗದ ವೇಳೆ ಲವ್; ಮದುವೆಯಲ್ಲಿ ತಮ್ಮ ಕಂಪನಿಗೆ ಡಿಫರೆಂಟಾಗಿ ಥ್ಯಾಂಕ್ಸ್ ಹೇಳಿದ ವಧು! – Kannada News | Girl Met Her Groom At Amazon Gets Company Logo On Mehendi At Her Wedding Watch Video

ನವದೆಹಲಿ, ಫೆಬ್ರವರಿ 16: ಕಂಪನಿಗಳಲ್ಲಿ ಅನೇಕ ಲವ್ ಸ್ಟೋರಿಗಳು ನಡೆಯುತ್ತಿರುತ್ತವೆ, ಕೆಲವೊಮ್ಮೆ ಅಲ್ಲೇ ಇರುವ ಸಹೋದ್ಯೋಗಿಗಳಿಗೂ ಈ ವಿಷಯ ಗೊತ್ತಾಗುವುದಿಲ್ಲ. ಅಮೆಜಾನ್‌ (Amazon) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಲ್ಲೇ ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸಿದಳು. ಆತನ ಜೊತೆ ಮದುವೆಯೂ ನಿಶ್ಚಯವಾಯಿತು. ಆಕೆ ತನಗೆ ಬಾಳ ಸಂಗಾತಿಯನ್ನು ಕೊಟ್ಟ ಕಂಪನಿಯಾದ ಅಮೆಜಾನ್​​ನ ಲೋಗೋವನ್ನು ತನ್ನ ಮೆಹಂದಿ ಶಾಸ್ತ್ರದಲ್ಲಿ ಕೈಯಲ್ಲಿ ಚಿತ್ರಿಸಿಕೊಳ್ಳುವ ಮೂಲಕ ತಮ್ಮಿಬ್ಬರ ಪರಿಚಯಕ್ಕೆ ಕೊಂಡಿಯಾದ ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾಳೆ. ವಧು ಪ್ರಿಯಾಂಶಿ ಶ್ರೀಮಲ್ ತನ್ನ ಪ್ರಿಯಕರನ…

Read More

ಚೆಕ್ ಬೌನ್ಸ್ ಕೇಸ್; ಜಾಮೀನು ಪಡೆದು ನಿಟ್ಟುಸಿರು ಬಿಟ್ಟ ರಾಜ್​ಪಾಲ್ ಯಾದವ್ – Kannada News | Actor Rajpal Yadav gets bail in Cheque Bounce case

ಹಿಂದಿ ಚಿತ್ರರಂಗದ ಖ್ಯಾತ ನಟ ರಾಜ್​ಪಾಲ್ ಯಾದವ್ (Rajpal Yadav) ಅವರು ತಿಹಾರ್ ಜೈಲು ಸೇರಿದ್ದರು. 9 ಕೋಟಿ ರೂಪಾಯಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರನ್ನು ಜೈಲಿಗೆ ಕಳಿಸಲಾಗಿತ್ತು. ಈಗ ಅವರು ಜಾಮೀನು ಪಡೆದುಕೊಂಡಿದ್ದಾರೆ. ಇಂದು (ಫೆಬ್ರವರಿ 16) ರಾಜ್​ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು (Bail) ನೀಡಿದೆ. ಮಧ್ಯಾಹ್ನ 3 ಗಂಟೆ ಒಳಗೆ 1.3 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಹಣ ಹೊಂದಿಸಿದ ಬಳಿಕ ಅವರಿಗೆ ಜಾಮೀನು ನೀಡಲಾಯಿತು….

Read More

ಕಾಂಗ್ರೆಸ್ MLA​ಗೆ ಬಿಗ್ ಶಾಕ್: ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್ – Kannada News | Karnataka High Court Invalidates bagepalli Congress MLA Subba Reddy elect

ಬೆಂಗಳೂರು, (ಫೆಬ್ರವರಿ 16): ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ (bagepalli Congress MLA Subba Reddy )ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಬಿಜೆಪಿಯ ಸಿ ಮುನಿರಾಜು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಹೈಕೋರ್ಟ್ ಪೀಠ, ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಆದೇಶಿಸಿದೆ. ಇನ್ನು ಅಸಿಂಧುಗೊಳಿಸಿದ ಆದೇಶವನ್ನು ಕೋರ್ಟ್, ಚುನಾವಣಾ ಆಯೋಗ ಹಾಗೂ…

Read More

Bidar: ಆಕಸ್ಮಿಕವಾಗಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದು ತಂದೆ-ಮಗ ಸಾವು – Kannada News | Karanja Dam Tragedy: Father, Son Drown in Bidar Canal After Rescue Attempt

ಕಾಲುವೆಯಿಂದ ಮೃತ ದೇಹ ಹೊರ ತೆಗೆಯುತ್ತಿರುವುದುImage Credit source: Tv9 Kannada ಬೀದರ್​​, ಫೆಬ್ರವರಿ 16: ಆಕಸ್ಮಿಕವಾಗಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದು ತಂದೆ, ಮಗ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ನಡೆದಿದೆ. ಹಳ್ಳಿಖೇಡ್(ಬಿ) ಗ್ರಾಮದ ವಿಶ್ವನಾಥ(50) ಮತ್ತು ಅಮರೇಶ(23) ಮೃತ ದುರ್ದೈವಿಗಳಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೋಲಿಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿದ್ದಾರೆ. ಮೃತ ದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಕಾಲುವೆಯಿಂದ ಹೊರ ತೆಗೆದಿದ್ದಾರೆ. ಮಗನ ಉಳಿಸಲು…

Read More

ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು? – Kannada News | AI impact on the world, not IT service and BPO jobs in 5 years, says Vinod Khosla

ನವದೆಹಲಿ, ಫೆಬ್ರುವರಿ 16: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ದಿನೇ ದಿನೇ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಮನುಷ್ಯರ ಬಹುತೇಕ ಉದ್ಯೋಗಗಳು ಇಲ್ಲವಾಗುತ್ತವೆ ಎಂದು ಅನೇಕ ಟೆಕ್ ಪಂಡಿತರು ಹೇಳುತ್ತಿದ್ದಾರೆ. ಅಮೆರಿಕದಲ್ಲಿ ಹೆಸರಾಂತ ಉದ್ಯಮಿ ಮತ್ತು ಹೂಡಿಕೆದಾರರಾಗಿರುವ ಭಾರತ ಮೂಲದ ವಿನೋದ್ ಖೋಸ್ಲಾ (Vinod Khosla) ಕೂಡ ಇದೇ ಅಭಿಪ್ರಾಯ ಪುನರುಚ್ಚರಿಸಿದ್ದಾರೆ. ಇವರ ಪ್ರಕಾರ ಮುಂದಿನ ಐದು ವರ್ಷದಲ್ಲಿ ಐಟಿ ಸರ್ವಿಸ್ ಮತ್ತು ಬಿಪಿಒ ಕೆಲಸಗಳು ಬಹುತೇಕ ಪೂರ್ಣವಾಗಿ ಕಾಣೆಯಾಗುತ್ತವಂತೆ. ‘ಐಟಿ ಮತ್ತು ಬಿಪಿಒ ಸೇವೆಗಳು ಮುಂದಿನ ಐದು ವರ್ಷದಲ್ಲಿ ಮರೆಯಾಗುವುದು…

Read More