ಹಾಸನದಲ್ಲಿ ತಪ್ಪಿದ ಭಾರಿ ದುರಂತ: ಕೆರೆ ಪಕ್ಕದ ಮರಕ್ಕೆ ಗುದ್ದಿ ನಿಂತ ಸ್ಕೂಲ್ ಬಸ್ – Kannada News | Seven Students Injured in Separate School Bus Accidents in Hassan and Dakshina Kannada
ಕೆರೆ ಬಳಿ ಮರಕ್ಕೆ ಗುದ್ದಿರುವ ಶಾಲಾ ಬಸ್Image Credit source: Tv9 Kannada ಹಾಸನ/ಮಂಗಳೂರು, ಫೆಬ್ರವರಿ 16: ಖಾಸಗಿ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಕೆರೆಯ ಏರಿ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕೆರೆ ಕಡೆಗೆ ವಾಲಿನಿಂತ ಘಟನೆ ಅರಕಲಗೂಡು ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಮುಕ್ಕನಹಳ್ಳಿ ಗ್ರಾಮದ ಬಳಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಬಸ್ ಕೆರೆಗೆ ಬೀಳುವುದು ತಪ್ಪಿದ್ದು, 40 ವಿದ್ಯಾರ್ಥಿಗಳು ಈ ಶಾಲಾ ಬಸ್ನಲ್ಲಿದ್ದರು ಎನ್ನಲಾಗಿದೆ. ಅಪಘಾತಕ್ಕೀಡಾಗಿರುವ ಬಸ್ ಶ್ರೀ ಸಿದ್ದರಾಮೇಶ್ವರ…