ಅಗ್ನಿಶಾಮಕ ಇಲಾಖೆ ಹುದ್ದೆಗಳ ಮರು ನಾಮಕರಣಕ್ಕೆ ಸರ್ಕಾರ ಅಸ್ತು: ಇನ್ಮುಂದೆ ಫೈರ್‌ಮ್ಯಾನ್ ಅಲ್ಲ ಫೈರ್ಫೈಟರ್ – Kannada News | Karnataka fire department: Fireman Renamed Fire Fighter; 10 percent Women Quota in Recruitment
ಅಗ್ನಿಶಾಮಕ (ಸಂಗ್ರಹ ಚಿತ್ರ)Image Credit source: google ಬೆಂಗಳೂರು. ಫೆಬ್ರವರಿ 15: ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಅಗ್ನಿಶಾಮಕ ಇಲಾಖೆಯ ಹುದ್ದೆ ಮರು ನಾಮಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಇನ್ಮುಂದೆ ‘ಫೈರ್‌ಮ್ಯಾನ್’ (Fireman) ಬದಲಿಗೆ ‘ಫೈರ್ ಫೈಟರ್’ (Fire Fighter) ಎಂದು ಬದಲಾವಣೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಸಭೆಯ ತೀರ್ಮಾನದಂತೆ ಕ್ರಮಕೈಗೊಳ್ಳಲಾಗಿದೆ. ಆ ಮೂಲಕ ಅಗ್ನಿಶಾಮಕ ಇಲಾಖೆಯ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲು ಸಿದ್ಧತೆ ನಡೆದಿದೆ. ಆದೇಶದಲ್ಲೇನಿದೆ? ಕೇಂದ್ರ ಗೃಹ…