ಶಾಸಕ ಭೈರತಿ ಬಸವರಾಜ್ಗೆ ಆರೋಗ್ಯ ಸಮಸ್ಯೆ, ತಪಾಸಣೆಗೆ ಕೋರ್ಟ್ ಸೂಚನೆ: ನಾಳೆ ಜೈಲೋ, ಸಿಐಡಿ ಕಸ್ಟಡಿಯೋ ತೀರ್ಮಾನ – Kannada News | Biklu Shiva Case: MLA Byrathi Basavaraj to Get Jayadeva Heart Treatment as Court Directs CID
ಬೆಂಗಳೂರು, ಫೆ.13: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಶದಲ್ಲಿರುವ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ (Byrathi Basavaraj) ಅವರಿಗೆ ಚಿಕಿತ್ಸೆ ಕೊಡಿಸಲು ಕೋರ್ಟ್ ಸೂಚನೆ ನೀಡಿದೆ. ಹೃದಯ ಸಂಬಂಧಿ ಸಮಸ್ಯೆ ಬಗ್ಗೆ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಸಿಐಡಿಗೆ ಸೂಚಿಸಿದೆ. ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸಿಐಡಿ ವಶದಲ್ಲಿರುವ ಭೈರತಿ ಬಸವರಾಜ್ ಅವರನ್ನು ಇಂದು…