ಲೋಕಾರ್ಪಣೆಗೆ ಸಜ್ಜಾಗ್ತಿದೆ ದೇಶದ ಅತಿ ಎತ್ತರದ ಜಯದೇವ ಮೆಟ್ರೋ ಸ್ಟೇಷನ್: 155 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ – Kannada News
ಪಂಚಸ್ತರದ ಜಯದೇವ ಮೆಟ್ರೋ ನಿಲ್ದಾಣImage Credit source: tv9 ಬೆಂಗಳೂರು, ಜೂನ್ 12: ಬೆಂಗಳೂರಿನ ವಾಹನ ಸವಾರರು ಹಾಗೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶದಲ್ಲೇ ಅತಿ ಎತ್ತರದ ಹಾಗೂ ವಿಶಿಷ್ಟ ತಂತ್ರಜ್ಞಾನದ ಇಂಟರ್‌ಚೇಂಜ್ ನಿಲ್ದಾಣ ಎಂದೇ ಖ್ಯಾತಿ ಪಡೆದಿರುವ ಜಯದೇವ ಆಸ್ಪತ್ರೆ ಮೆಟ್ರೋ ಸ್ಟೇಷನ್ (Jayadeva Metro Station) ಇದೇ ಆಗಸ್ಟ್ ತಿಂಗಳಿನಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಒಟ್ಟು ಐದು ಸ್ತರಗಳಲ್ಲಿ (5-Tier) ನಿರ್ಮಾಣವಾಗಿರುವ ದೇಶದ ಮೊದಲ ಮೆಟ್ರೋ…