ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಉಖ್ರುಲ್‌ನಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ – Kannada News | Fresh violence erupts in Manipur Ukhrul Over 20 Houses Set Ablaze in Litan Village
ಉಖ್ರುಲ್, ಫೆಬ್ರವರಿ 9: ಮಣಿಪುರದಲ್ಲಿ (Manipur) ನೂತನ ಮುಖ್ಯಮಂತ್ರಿಯಾಗಿ ಖೇಮ್ಚಂದ್ ಸಿಂಗ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಉಖ್ರುಲ್ ಜಿಲ್ಲೆಯ ಲಿಟಾನ್ ಗ್ರಾಮದಲ್ಲಿ ತಂಗ್ಕುಲ್ ನಾಗಾ ಸಮುದಾಯಕ್ಕೆ ಸೇರಿದ 20 ಮನೆಗಳಿಗೆ ಕುಕಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಭಾನುವಾರ ತಂಗ್ಕುಲ್ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ನಂತರ ಈ ಗ್ರಾಮದಲ್ಲಿ ಕರ್ಫ್ಯೂ ವಿಧಿಸಲಾಯಿತು. ಆದೇಶದ ಪ್ರಕಾರ, 2 ಸಮುದಾಯಗಳಾದ ತಂಗ್ಖುಲ್ ಮತ್ತು ಕುಕಿ ನಡುವೆ ಶಾಂತಿ ಮತ್ತು ನೆಮ್ಮದಿಗೆ…