ಎರಡನೇ ಬಾರಿಗೆತಾಯಿ ಆಗ್ತಿದ್ದಾರೆ ಸೋನಂ ಕಪೂರ್; ಸೀಮಂತ ಶಾಸ್ತ್ರದ ಫೋಟೋ ವೈರಲ್ – Kannada News | Sonam Kapoor to be mom soon at the age of 40 Sonam Kapoor Baby Shower Photos
ಸೋನಂ ಕಪೂರ್ ಅವರು ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಟನೆ ಮಾಡಿದರು. ಆದರೆ, ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲೇ ಇಲ್ಲ. ಈಗ ಅವರು ಫ್ಯಾಮಿಲಿ ಜೊತೆ ಹಾಯಾಗಿದ್ದಾರೆ. ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಕಪೂರ್ ವಿವಾಹ ಆಗಿದ್ದಾರೆ. 2018ರಲ್ಲಿ ಅದ್ದೂರಿಯಾಗಿ ಈ ಮದುವೆ ನಡೆಯಿತು. ಈಗ ಸೋನಂ ಕಪೂರ್ ಅವರು ಎರಡನೇ ಬಾರಿಗೆ ತಾಯಿ ಆಗುತ್ತಿದ್ದಾರೆ. 2022ರಲ್ಲಿ ಸೋನಂ ಕಪೂರ್ ಅವರಿಗೆ ಗಂಡು ಮಗು ಜನಿಸಿತು. ಮಗುವಿಗೆ ಅವರು ವಾಯು ಎಂದು ನಾಮಕರಣ ಮಾಡಿದ್ದಾರೆ….