ಕರ್ನಾಟಕದಲ್ಲಿ ಮತ್ತೊಂದು ದರೋಡೆ: ಫ್ಲಿಪ್ಕಾರ್ಟ್ನ ಲಕ್ಷಾಂತರ ರೂ ಮೌಲ್ಯದ ವಸ್ತುಗಳ ಕಳ್ಳತನ – Kannada News | Haveri: 24 Lakh Flipkart Mobiles Stolen from Goods Vehicle
ಹಾವೇರಿಯಲ್ಲಿ ಕಳ್ಳತನ Image Credit source: tv9 kannada ಹಾವೇರಿ, ಫೆಬ್ರವರಿ 06: ಇತ್ತೀಚೆಗೆ ಬೆಳಗಾವಿಯ ಚೋರ್ಲಾಘಾಟ್ನಲ್ಲಿ 400 ಕೋಟಿ ರೂ ಹೊತ್ತೊಯ್ತಿದ್ದ ಹಣವನ್ನ ಕಂಟೇನರ್ ಸಮೇತ ಹೈಜಾಕ್ ಮಾಡಲಾಗಿದೆ ಅನ್ನೋ ವಿಷಯ ಕೋಲಾಹಲ ಸೃಷ್ಟಿಸಿತ್ತು. ಇದೀಗ ಅದರಂತೆ ಹೋಲುವ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಫ್ಲಿಪ್‌ಕಾರ್ಟ್ (Flipkart) ಕಂಪನಿಗೆ ಸೇರಿದ 24 ಲಕ್ಷ ರೂ ಮೌಲ್ಯದ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ಖದೀಮರು ಮೂವಿಂಗ್ ಗೂಡ್ಸ್ ವಾಹನದಿಂದಲೇ ಮಂಗಮಾಯ (theft) ಮಾಡಿದ್ದಾರೆ. ಬೆಂಗಳೂರಿನಿಂದ ಧಾರವಾಡದ ಕೊಟೂರ…