ಅಂಡರ್-19 ವಿಶ್ವಕಪ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ – Kannada News | India becomes first team to reach finals for 10 times
ಅಂಡರ್-19 ವಿಶ್ವಕಪ್ನ 16ನೇ ಆವೃತ್ತಿಯಲ್ಲೂ ಭಾರತ ತಂಡ ಫೈನಲ್ಗೇರಿದೆ. ಹರಾರೆಯಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಟೀಮ್ ಇಂಡಿಯಾ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟಿದೆ. ಈ ಎಂಟ್ರಿಯೊಂದಿಗೆ ವಿಶೇಷ ವಿಶ್ವ ದಾಖಲೆಯನ್ನು ಕೂಡ ತನ್ನದಾಗಿಸಿಕೊಂಡಿದೆ. ಅಂದರೆ ಭಾರತ ತಂಡವು ಅಂಡರ್-19 ವಿಶ್ವಕಪ್ನಲ್ಲಿ ಫೈನಲ್ಗೆ ಏರುತ್ತಿರುವುದು ಇದು 10ನೇ ಬಾರಿ. ಈ ಮೂಲಕ ಕಿರಿಯರ ವಿಶ್ವಕಪ್ನಲ್ಲಿ ಅತೀ ಹೆಚ್ಚು ಬಾರಿ ಫೈನಲ್ಗೇರಿದ ತಂಡವೆಂಬ ಹೆಗ್ಗಳಿಕೆಯನ್ನು ಟೀಮ್ ಇಂಡಿಯಾ ತನ್ನ ಹೆಸರಿಗೆ ಸೇರ್ಪಡೆಗೊಳಿಸಿದೆ. …