ರಂಜಾನ್ ಹಿನ್ನೆಲೆ ಉರ್ದು ಶಾಲಾ ಸಮಯ ಬದಲಾವಣೆಗೆ ವಿರೋಧ: ಇದ್ಯಾವ ಸಮಾನತೆ ಎಂದ ಯತ್ನಾಳ್ – Kannada News | Ramadan School Hours Change in Karnataka Sparks Controversy; Pro Hindu Organisations Oppose
ಬೆಂಗಳೂರು, ಫೆಬ್ರವರಿ 03: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಹಿನ್ನೆಲೆಯಲ್ಲಿ ಕರ್ನಾಟಕದ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ ಸಮಯವನ್ನು ಪರಿಷ್ಕರಿಸಿರೋದಕ್ಕೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಹಿಂದೂಗಳ ಯಾವುದೇ ಹಬ್ಬಗಳಿಗೂ ಶಾಲಾ ಸಮಯ ಬದಲಾವಣೆ ಮಾಡಲ್ಲ. ಇದು ಕಾನೂನು ಸಮಾನತೆಯ ಉಲ್ಲಂಘನೆಯಾಗಿದ್ದು, ಈ ಕೂಡಲೇ ಸುತ್ತೋಲೆ ವಾಪಸ್ ಪಡೆಯಬೇಕು. ನವರಾತ್ರಿ, ಗಣೇಶ ಚತುರ್ಥಿಯಂತಹ ಹಬ್ಬಗಳ ಸಂದರ್ಭ ಶಾಲಾ ಸಮಯದಲ್ಲಿ ಯಾವುದೇ ಬದಲಾವಣೆ ಇರಲ್ಲ. ಹೀಗಾಗಿ ತಾರತಮ್ಯ ಬೇಡ ಎಂಬ ಒತ್ತಾಯ ಕೇಳಿ…