ಫ್ರಾನ್ಸ್ ಕೊಡಲ್ಲವೆಂದಾಗ ಹುಟ್ಟುಕೊಂಡ ಕಿಚ್ಚು; ಡಿಆರ್ಡಿಒ ವಿಜ್ಞಾನಿಗಳು ಗ್ಯಾನ್ ಚಿಪ್ ಟೆಕ್ನಾಲಜಿ ರಹಸ್ಯ ಭೇದಿಸಿದ ಕಥೆ – Kannada News | Inspiring story of DRDO scientists indigenously developing GaN chip tech after France denial
ದೃಢ ಸಂಕಲ್ಪ ಮತ್ತು ಅವಶ್ಯಕತೆ ಎರಡೂ ಸೇರಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಭಾರತ ಗ್ಯಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ (GaN semiconductor technology) ಸಿದ್ಧಿಸಿಕೊಂಡ ಕಥೆ ಸಾಕ್ಷಿಯಾಗಿದೆ. ಗ್ಯಾನ್ ಚಿಪ್ಗಳನ್ನು ತಯಾರಿಸಬಲ್ಲ ತಂತ್ರಜ್ಞಾನ ಹೊಂದಿದ ಐದಾರು ದೇಶಗಳ ಸಾಲಿಗೆ ಭಾರತ ಸೇರಿಕೊಂಡಿದೆ. 2023ರಲ್ಲಿ ಡಾ. ಮೀನಾ ಮಿಶ್ರಾ (Dr. Meena Mishra) ನೇತೃತ್ವದಲ್ಲಿ ಡಿಆರ್ಡಿಒ ವಿಜ್ಞಾನಿಗಳ ತಂಡವೊಂದು ಈ ಐತಿಹಾಸಿಕ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿತ್ತು. ಭಾರತದ ಸ್ವಾವಲಂಬನೆಯ ಹಾದಿಯಲ್ಲಿ ಅದು ನಿಜಕ್ಕೂ ಮಹತ್ವಪೂರ್ಣವೆನಿಸುವ ಒಂದು…