ಮದ್ವೆ ಆರತಕ್ಷತೆಗೆ ತೆರಳುತ್ತಿದ್ದ ವರನಿಗೆ ಚೂರಿ ಇರಿತ: ಯುವತಿಯ ಮಾಜಿ ಲವರ್ ಕೃತ್ಯ ಶಂಕೆ – Kannada News | Miscreants Attacks On groom Who Going to marriage reception at kollegal
ಚಾಮರಾಜನಗರ, (ಜನವರಿ 29): ಮದುವೆಯ ಆರತಕ್ಷತೆಗೆ (marriage reception) ತೆರಳುತ್ತಿದ್ದ ವರನ (groom) ಕಾರು ಅಡ್ಡಿಗಟ್ಟಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ (Chamarajnagar) ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್ ನಲ್ಲಿ ಆಯೋಜಿಸಿದ್ದ ಆರತಕ್ಷತೆ ಕಾರ್ಯಕ್ಕೆ ವರ ರವೀಶ್ ತೆರಳುತ್ತಿದ್ದ ವೇಳೆ ಅಪರಿಚಿತರು ಏಕಾಏಕಿ ದಾಳಿ ಮಾಡಿದ್ದಾರೆ. ಕುಣಗಳ್ಳಿ ಗ್ರಾಮದಿಂದ ಹೋಗುತ್ತಿದ್ದ ವೇಳೆ ವರ ರವೀಶ್ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ನೀನು ಮದ್ವೆ ಮನೆಗಲ್ಲ ಸ್ಮಶಾನಕ್ಕೆ ತೆರಳಬೇಕೆಂದು ಚಾಕು, ಡ್ರ್ಯಾಗರ್ನಿಂದ ಹಲ್ಲೆ ಮಾಡಿದ್ದಾರೆ….