Headlines

ಪದೇ ಪದೇ ಶೀತವಾಗುವುದು ಈ ಕಾಯಿಲೆಯ ಆರಂಭಿಕ ಲಕ್ಷಣವಾಗಿರಬಹುದು ಎಚ್ಚರ! – Kannada News | Sore Throat & Cough Keep Coming Back: What To Do

ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಶೀತವಾಗುವುದು (Cold) ಬಹಳ ಸಾಮಾನ್ಯ. ಅದರಲ್ಲಿಯೂ ಹವಾಮಾನ ಬದಲಾವಣೆಯ ಸಮಯದಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ, ಆದರೆ ಈ ಸಮಸ್ಯೆ ಪ್ರತಿ ತಿಂಗಳು ಕಾಣಿಸಿಕೊಂಡರೆ, ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಏಕೆಂದರೆ ಇದು ಗಂಭೀರ ಅನಾರೋಗ್ಯದ ಆರಂಭಿಕ ಲಕ್ಷಣವಾಗಿರಬಹುದು. ಹೌದು, ಪುನರಾವರ್ತಿತವಾಗಿ ನೆಗಡಿಯಾಗುವುದು ಕೆಲವು ರೋಗ ಬರುವ ಮುನ್ಸೂಚನೆಯಾಗಿರುತ್ತದೆ. ಹಾಗಾದರೆ ಈ ರೀತಿ ಆಗುತ್ತಿದ್ದರೆ ಏನು ಮಾಡಬೇಕು, ಯಾವ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ. ದೆಹಲಿಯ ಮೌಲಾನಾ ಆಜಾದ್…

Read More

12 ಕೋಟಿ ರೂ. ಕಾರು ಖರೀದಿಸಿ, 10 ನಿಮಿಷದಲ್ಲಿ ಬೋರ್ ಆಯ್ತು ಎಂದ ಗಾಯಕ ಬಾದ್​ಷಾ – Kannada News | Singer Badshah talks about Rolls Royce Cullinan Series 2

ಗಾಯಕ ಬಾದ್​ಷಾ (Singer Badshah) ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆ ಬೇಡಿಕೆಗೆ ತಕ್ಕಂತೆ ಅವರಿಗೆ ಸಂಭಾವನೆ ಸಿಗುತ್ತದೆ. ಪ್ರತಿ ಹಾಡಿಗೆ ಅಂದಾಜು 20 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ಅವರ ಲೈಫ್ ಸ್ಟೈಲ್ ಕೂಡ ಐಷಾರಾಮಿ ಆಗಿದೆ. ದುಬಾರಿ ವಸ್ತುಗಳ ಬಗ್ಗೆ ಅವರು ಸಖತ್ ಕ್ರೇಜ್ ಇದೆ. ಜಗತ್ತಿನ ಅತಿ ದುಬಾರಿ ಜಾಕೆಟ್, ಶೂ, ಕಾರುಗಳು ಬಾದ್​ಚಾ ಅವರ ಬಳಿ ಇವೆ. ಅಚ್ಚರಿ ಏನೆಂದರೆ, 12 ಕೋಟಿ ರೂಪಾಯಿ ಬೆಲೆ ಬಾಳುವ ರೋಲ್ಸ್ ರಾಯ್ಸ್ (Rolls…

Read More

ಕೊಡಗಿನಲ್ಲಿ ಲವ್ ಜಿಹಾದ್ ನಡೆಯುತ್ತಿದೆಯಾ? ಹಿಂದೂ ಪರಸಂಘಟನೆಗಳಿಂದ ಬೀದಿಗಿಳಿದು ಹೋರಾಟ – Kannada News | Siddapur Love Jihad: Kodagu Hindu Girls Marrying Outside Faith, Locals Protest

ಕೊಡಗು, ಜನವರಿ 27: ಜಿಲ್ಲೆಯಲ್ಲಿ ಲವ್ ಜಿಹಾದ್ (Love Jihad) ನಡೆಯುತ್ತಿದೆಯಾ? ಎಂಬ ಗಂಭೀರ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಲವ್ ಜಿಹಾದ್ ವಿರುದ್ಧ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ (protest) ಕೂಡ ನಡೆದಿದೆ. ಪ್ರತಿಭಟನಾಕಾರರ ಪ್ರಕಾರ ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ 10ಕ್ಕೂ ಹೆಚ್ಚು ಹಿಂದೂ ಯುವತಿಯರು ಅನ್ಯಧರ್ಮೀಯರನ್ನ ವಿವಾಹ ಆಗಿದ್ದಾರಂತೆ. ಹೀಗಾಗಿ ಇದನ್ನು ಖಂಡಿಸಿ ಹಿಂದೂ ಸುರಕ್ಷಾ‌ ಸಮಿತಿಯಿಂದ ಇಂದು ಪ್ರತಿಭಟನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಮತೀಯ ಸೂಕ್ಷ್ಮ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಲವ್ ಜಿಹಾದ್ ನಡೆಯುತ್ತಿರುವ ಆರೋಪಗಳು…

Read More

ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್​ T2 ಆಲ್ಫಾ 5ನೇ ಹಂತದ ಕಾರ್ಯಾಚರಣೆಯೂ ಯಶಸ್ವಿ – Kannada News | Chamarajanagar: Operation T2 Alpha Phase 5 Succeeds; Another Female Tiger Cub Captured

ಚಾಮರಾಜನಗರ, ಜನವರಿ 27: ಆಪರೇಷನ್ ಟಿ2 ಆಲ್ಫಾ ಐದನೇ ಹಂತ ಯಶಸ್ವಿಯಾಗಿದೆ. 6 ಹುಲಿಗಳ ಪೈಕಿ ಈಗಾಗಲೇ 5 ಹುಲಿ (Tigers) ಸೆರೆಯಾಗಿದ್ದು, ಇನ್ನು ಕೇವಲ 1 ಹುಲಿ ಮಾತ್ರ ಬಾಕಿ ಇದೆ. ಥರ್ಮಲ್ ಡ್ರೋನ್ ಕ್ಯಾಮರಾ ಮೂಲಕ ಕೂಂಬಿಂಗ್ ನಡೆಸಿದ್ದ ಸಿಬ್ಬಂದಿ 10 ತಿಂಗಳ ಹೆಣ್ಣು ಹುಲಿ ಮರಿ ಸೆರೆ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿ ಆಗಿದ್ದಾರೆ. ಮತ್ತೊಂದು ಹೆಣ್ಣು ಹುಲಿ ಮರಿ ಸೆರೆ ಕಳೆದೊಂದು ತಿಂಗಳಿನಿಂದ ಬಿಟ್ಟು ಬಿಡದೆ ಮೂರ್ನಾಲ್ಕು ಗ್ರಾಮಸ್ಥರ ನಿದ್ದೆಗೆಡಿಸಿದ್ದ 5 ಹುಲಿಗಳ…

Read More

Patanjali Model: ಜಾಗತಿಕ ಬ್ರ್ಯಾಂಡ್​ಗಳಿಗೆ ಪೈಪೋಟಿ ನೀಡುತ್ತಿರುವ ಪತಂಜಲಿಯ ಯಶಸ್ಸಿನ ಗುಟ್ಟೇನು? – Kannada News | Baba Ramdev’s Patanjali business model, know how it became successful in competing against MNC giants

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಭಾರತದಲ್ಲಿ ಪ್ರಮುಖ ಬ್ರ್ಯಾಂಡ್ ಅಥವಾ ಕಂಪನಿಯ ಬಗ್ಗೆ ಮಾತನಾಡುವಾಗಲೆಲ್ಲಾ ನಮ್ಮ ಗಮನ ಹೆಚ್ಚಾಗಿ ವಿದೇಶಿ ಬಹುರಾಷ್ಟ್ರೀಯ ಕಂಪನಿಗಳತ್ತ ತಿರುಗುತ್ತದೆ. ಆದಾಗ್ಯೂ, ಕಳೆದ ಕೆಲವು ವರ್ಷಗಳಲ್ಲಿ, ಜಾಗತಿಕ ಬ್ರ್ಯಾಂಡ್‌ಗಳ ಪ್ರಾಬಲ್ಯಕ್ಕೆ ಸವಾಲೊಡ್ಡುವ ರೀತಿಯಲ್ಲಿ ಸ್ಥಳೀಯ ಬ್ರ್ಯಾಂಡ್​ವೊಂದು ಮಿಂಚತೊಡಗಿದೆ, ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚೆಚ್ಚು ಬೆಳೆಯತೊಡಗಿದೆ. ಅದುವೇ ಪತಂಜಲಿ. ಪತಂಜಲಿ ಯೋಗಪೀಠ ನಿರ್ವಹಿಸುವ ಎಮರ್ಜೆನ್ಸಿ ಮತ್ತು ಕ್ರಿಟಿಕಲ್ ಕೇರ್ ಆಸ್ಪತ್ರೆಯನ್ನು (Patanjali Speciality Hospital) ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು. ಇದು ಕೇವಲ…

Read More

ಶಿಡ್ಲಘಟ್ಟ ಬೆದರಿಕೆ ಪ್ರಕರಣ: ಆಶ್ರಯ ನೀಡಿದ್ದ ಉದ್ಯಮಿಗೆ ರಿಲೀಫ್, ರಾಜೀವ್ ಗೌಡನಿಗೆ ಶಾಕ್ – Kannada News | Accused Rajeev Gowda sent to judicial custody in Sidlaghatta official threat case

ಚಿಕ್ಕಬಳ್ಳಾಪುರ, (ಜನವರಿ 27): ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಅವಾಚ್ಯ ಶಬ್ಧಗಳ ನಿಂದನೆ ಹಾಗೂ ಬೆದರಿಕೆ ಪ್ರಕರಣಕ್ಕೆ (Sidlaghatta official threat case) ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನಿಗೆ (Rajeev Gowda) ಕೋರ್ಟ್​ ಶಾಕ್ ಕೊಟ್ಟಿದೆ. ರಾಜೀವ್ ಗೌಡಗೆ ಮಧ್ಯಂತರ ಜಾಮೀನು ನೀಡಲು ಶಿಡ್ಲಘಟ್ಟದ ಜೆಎಂಎಫ್​ಸಿ ಕೋರ್ಟ್ ನಿರಾಕರಿಸಿದೆ. ಬದಲಿಗೆ 14 ದಿನ ಅಂದರೆ ಫೆಬ್ರವರಿ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. ಇನ್ನೊಂದೆಡೆ ಆರೋಪಿ ರಾಜೀವ್​​ ಗೌಡನಿಗೆ ಆಶ್ರಯ ನೀಡಿ ಪೊಲೀಸರ ಬಂಧನಕ್ಕೊಳಗಾಗಿದ್ದ…

Read More

ಚಿಕ್ಕಬಳ್ಳಾಪುರದ ರಾಜೀವ್​​ ಗೌಡನಿಗೂ ಮಂಗಳೂರಿನ ಉದ್ಯಮಿ ಮೈಕಲ್​​ಗೂ ಎಲ್ಲಿಂದ ನಂಟು? ಇಲ್ಲಿದೆ ಮಾಹಿತಿ – Kannada News | Shidlaghatta Threat Case: Rajeev Gowda and Mangaluru Businessman Michael Connection Under Probe

ಮಂಗಳೂರು, ಜನವರಿ 27: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ ಸಂಬಂಧ ಆರೋಪಿ ರಾಜೀವ್​​ ಗೌಡ ಜೊತೆ ಆತನಿಗೆ ಅಶ್ರಯ ಕೊಟ್ಟಿದ್ದ ಮಂಗಳೂರಿನ ಉದ್ಯಮಿ ಮೈಕಲ್ ರೇಗೋವನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ರಾಜೀವ್​​ ಗೌಡನಿಗೂ ಮಂಗಳೂರಿನ ಉದ್ಯಮಿಗೂ ಎಲ್ಲಿಂದ ನಂಟು? ಆತ ಯಾಕೆ ಆರೋಪಿಗೆ ಅಶ್ರಯ ಕೊಟ್ಟ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿದ್ದವು. ಅವೆಲ್ಲದಕ್ಕೂ ಈಗ ಉತ್ತರ ಸಿಕ್ಕಿದೆ. ರಾಜಕೀಯ ನಂಟೇ ಇಬ್ಬರ ನಡುವೆ ಪರಿಚಯಕ್ಕೆ ಕಾರಣವಾಗಿತ್ತು ಎಂಬ ಅಂಶ ತನಿಖೆ ವೇಳೆ ಬಯಲಾಗಿದೆ….

Read More

‘ಮಹಾವೀರ್ ನರಸಿಂಹ’ ಫೈಟ್ ಸೀನ್​​ ಕಾಪಿಯಾ ಅಥವಾ ಸ್ಪೂರ್ತಿಯಾ? – Kannada News | Did Mahavatar Narsimha movie scene copied from God Of war game

ಕಳೆದ ವರ್ಷ ಬಿಡುಗಡೆ ಆಗಿ ಬಾಕ್ಸ್ ಆಫೀಸ್​​ನಲ್ಲಿ (Box Office) ಭಾರಿ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಅನಿಮೇಷನ್ ಸಿನಿಮಾ ‘ಮಹಾತಾರ್ ನರಸಿಂಹ’ ಸಹ ಒಂದು. ಮಾತ್ರವಲ್ಲದೆ ಭಾರತ ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಮೊದಲ ಅನಿಮೇಷನ್ ಸಿನಿಮಾ ಸಹ ‘ಮಹಾವತಾರ್ ನರಸಿಂಹ’. ಕ್ಲೀಂ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ ಅಶ್ವಿನ್ ಕುಮಾರ್ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ವಿತರಣೆ ಮಾಡಿತ್ತು. ಕಿರಿಯರು, ಹಿರಿಯರು ಮುಗಿಬಿದ್ದು ಈ ಸಿನಿಮಾ ನೋಡಿದ್ದರು. ಆದರೆ ಇದೀಗ…

Read More

ಕೇರಳದಲ್ಲಿ ಮೆಡಿಕಲ್ ಕಾಲೇಜು ವೈದ್ಯರಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಪ್ರತಿಭಟನೆ – Kannada News | Protest demanding pay revision by medical college doctors begins in Kerala

ತಿರುವನಂತಪುರಂ, ಜನವರಿ 27: ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ವೇತನ ಪರಿಷ್ಕರಣೆ ಮತ್ತು ಮೂಲಸೌಕರ್ಯಗಳ ದೀರ್ಘಾವಧಿಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ರಾಜ್ಯಾದ್ಯಂತ ವೈದ್ಯಕೀಯ ಕಾಲೇಜುಗಳ ವೈದ್ಯರು ತಮ್ಮ ಪ್ರತಿಭಟನೆಯನ್ನು (Protest) ತೀವ್ರಗೊಳಿಸಲು ಸಜ್ಜಾಗಿದ್ದು, ಸಚಿವಾಲಯದ ಮುಂದೆ ಧರಣಿ ಆರಂಭಿಸಲಿದ್ದಾರೆ. ನಾವು ಆರಂಭಿಕ ಹಂತದ ವೈದ್ಯರ ವೇತನ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದೇವೆ. ಅವರಲ್ಲಿ ಹೆಚ್ಚಿನವರು ದಿನಕ್ಕೆ 14ರಿಂದ 15 ಗಂಟೆಗಳಿಗಿಂತ ಹೆಚ್ಚು ಕಾಲ ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಹಲವು ಹಂತಗಳಲ್ಲಿ ಮಾತುಕತೆ ನಡೆದಿದ್ದರೂ,…

Read More

ಫೆ.6ರಂದು ರಿಲೀಸ್ ಆಗಲಿದೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕರಿಕಾಡ’ – Kannada News | Karikaada Kannada Movie Ft Kaada Natraj Niriksha Shetty releasing on 6 Feb

ಕಾಡ ನಟರಾಜ್ (Kaada Natraj) ಅವರು ಹೀರೋ ಆಗಿ ನಟಿಸಿರುವ ‘ಕರಿಕಾಡ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಿರೀಕ್ಷಾ ಶೆಟ್ಟಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡು ನೋಡಿರುವ ಸಿನಿಪ್ರಿಯರಿಗೆ ಕುತೂಹಲ ಮತ್ತು ನಿರೀಕ್ಷೆ ಮೂಡಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಇವೆ. ಅದನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ. ಫೆಬ್ರವರಿ 6ರಂದು ‘ಕರಿಕಾಡ’ (Karikaada) ಸಿನಿಮಾ ರಿಲೀಸ್ ಆಗಲಿದೆ. ಅದು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಂಬುದು ವಿಶೇಷ. ‘ಕರಿಕಾಡ’ ಸಿನಿಮಾಗೆ…

Read More