ಕೋಗಿಲು ನಿವಾಸಿಗಳು ನಿರಾಶ್ರಿತರಲ್ಲ, ಲಕ್ಷಾಧಿಪತಿಗಳು! ಆರೋಪಿಗಳ ಖಾತೆಯಲ್ಲಿ ನಡೆದಿತ್ತು ಕೋಟಿ-ಕೋಟಿ ವ್ಯವಹಾರ – Kannada News | Kogilu Layout Eviction Takes Dramatic Turn: Residents Not Homeless but Millionaires, Crores Found in Accused Accounts
ಬೆಂಗಳೂರು, ಜನವರಿ 27: ಕೋಗಿಲು ಲೇಔಟ್ನಲ್ಲಿರುವ (Kogilu Layout) ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಕೇರಳದ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರವನ್ನು ‘ಬುಲ್ಡೋಜರ್ ರಾಜ್’ ಎಂದು ಟೀಕೆ ಮಾಡಿದ್ದರು. ಅಷ್ಟೇ ಯಾಕೆ, ಶತ್ರು ರಾಷ್ಟ್ರ ಪಾಕಿಸ್ತಾನ ಕೂಡಾ ಕೋಗಿಲು ಲೇಔಟ್ ಒತ್ತುವರಿ ಬಗ್ಗೆ ಟೀಕೆ ಮಾಡಿತ್ತು. ಆದರೆ ಈಗ, ಕೋಗಿಲು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರಿಗೆ ರೋಚಕ ಸಂಗತಿಗಳು ಗೊತ್ತಾಗಿವೆ. ಕೋಗಿಲು ಲೇಔಟ್ನ ಫಕೀರ್ ಕಾಲೋನಿ ಹಾಗೂ…