Headlines

ಖಾಸಗಿ ಬಸ್​​- ಕ್ರೂಸರ್​ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು, 8 ಮಂದಿ ಗಂಭೀರ – Kannada News | Three Killed, Eight Injured in Udupi as Private Bus Collides with Cruiser Van

ಬಸ್​​ ಮತ್ತು ಕ್ರೂಸರ್​​ ವಾಹನದ ನಡುವೆ ಅಪಘಾತ ಉಡುಪಿ/ ರಾಯಚೂರು, ಜನವರಿ 23: ಖಾಸಗಿ ಬಸ್​​ ಮತ್ತು ಕ್ರೂಸರ್​ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟರೆ, 8 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಬಳಿಯ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಡೆದಿದೆ. ಗಾಯಗೊಂಡ ಪ್ರಯಾಣಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಘಾತದ ರಭಸಕ್ಕೆ ಕ್ರೂಸರ್​​ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಠಾಣೆಯ ಪೊಲೀಸರು…

Read More

Weekly Love Horoscope: ಈ ರಾಶಿಯವರ ಪ್ರೀತಿಗೆ ಮನೆಯವರಿಂದ ಸಮ್ಮತಿ – Kannada News | January 25 31 Love Horoscope: Zodiac Predictions for Romance and Relationships

ಮೇಷ ರಾಶಿ : ಈ ವಾರ ಪ್ರೇಮಿಗಳಿಗೆ ಅತ್ಯಂತ ಶುಭದಾಯಕವಾಗಿದೆ. ನಿಮ್ಮ ಪ್ರೀತಿಗೆ ಮನೆಯಲ್ಲಿ ಹಿರಿಯರ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ವೃಷಭ ರಾಶಿ : ಸಂಬಂಧಗಳಲ್ಲಿ ತಾಳ್ಮೆ ಬಹಳ ಮುಖ್ಯ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದರೂ ಪ್ರೀತಿಯಿಂದ ಬಗೆಹರಿಸಿಕೊಳ್ಳಿ. ಪ್ರಣಯ ಜೀವನದಲ್ಲಿ ಹೊಸ ಚೈತನ್ಯ ಬರಲಿದೆ. ಮಿಥುನ ರಾಶಿ : ಸಂಗಾತಿಯೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗುವ ಯೋಗವಿದೆ. ನಿಮ್ಮ ಕ್ರಿಯಾಶೀಲತೆಯು ಪ್ರೇಮ ಜೀವನವನ್ನು ಇನ್ನಷ್ಟು ರೋಮಾಂಚನಗೊಳಿಸುತ್ತದೆ. ಕರ್ಕಾಟಕ ರಾಶಿ : ನಿಮ್ಮ ಭಾವನೆಗಳನ್ನು…

Read More

ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ‘ಮಾರ್ಕ್‌’: ಜ.23ರಿಂದ 4 ಭಾಷೆಗಳಲ್ಲಿ ಪ್ರಸಾರ – Kannada News | Mark movie on Jio Hotstar OTT streaming in 4 languages ​​from January 23

2025ರ ಬಹುನಿರೀಕ್ಷೆಯ ಸಿನಿಮಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಸಿನಿಮಾಗಳ ಪೈಕಿ ಕಿಚ್ಚ ಸುದೀಪ್‌ ನಟನೆಯ ‘ಮಾರ್ಕ್‌’ (Mark Movie) ಸಹ ಒಂದು. ಅಪಾರ ನಿರೀಕ್ಷೆಯಂತೆ, ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಡಿಸೆಂಬರ್‌ 25ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು ಈ ಸಿನಿಮಾ. ಆ್ಯಕ್ಷನ್‌ ಥ್ರಿಲ್ಲರ್‌ ಅಡ್ವೆಂಚರ್‌ ಜಾನರ್‌ನ ‘ಮಾರ್ಕ್‌’ ಸಿನಿಮಾಗೆ ಮೆಚ್ಚುಗೆಯ ಮಾತುಗಳೂ ಕೇಳಿಬಂದಿದ್ದವು. ಮಾಸ್‌ ಎಂಟರ್‌ಟೈನರ್‌ ಎಂಬಂತಹ ಪಾಸಿಟಿವ್‌ ವಿಮರ್ಶೆಗಳನ್ನೂ ಪಡೆದುಕೊಂಡಿತ್ತು ಈ ಸಿನಿಮಾ. ‘ಮಾರ್ಕ್‌’ ಸಿನಿಮಾದ ಒಟಿಟಿ (OTT) ಪ್ರಸಾರದ ಹಕ್ಕುಗಳನ್ನು ‘ಜಿಯೋ ಹಾಟ್‌ಸ್ಟಾರ್‌’ (Jio Hotstar)…

Read More

ಬೆಂಗಳೂರಿನ ಟ್ರಾಫಿಕ್ ನನ್ನನ್ನು ಆರೋಗ್ಯವಂತನನ್ನಾಗಿ ಮಾಡಿದೆ: 8 ಕೆಜಿ ತೂಕ ಇಳಿಸಿಕೊಂಡ ಟೆಕ್ಕಿ – Kannada News | Beat Bengaluru Traffic Stress: Techie’s Health Secret and WFH Impact

ಬೆಂಗಳೂರು, ಜ.23: ಜನದಟ್ಟಣೆಗೆ ವಿಶ್ವಪ್ರಸಿದ್ಧಯನ್ನು ಪಡೆದಿರುವ ಬೆಂಗಳೂರು ಟ್ರಾಫಿಕ್ (Bengaluru traffic health)​​​​​​ ಅನೇಕರಿಗೆ ಕಿರಿಕಿರಿಯನ್ನು ಉಂಟು ಮಾಡಿದ್ರೆ, ಈ ವ್ಯಕ್ತಿಯನ್ನು ಮಾತ್ರ ಆರೋಗ್ಯವಂತನಾಗಿ ಮಾಡಿದೆ ಎಂದು ಹೇಳಿದ್ದಾರೆ. ಜೀವನದಲ್ಲಿ ಆಗುವ ನಕಾರಾತ್ಮಕ ವಿಚಾರಗಳ ಬಗ್ಗೆ ತುಂಬಾ ತಲೆಬಿಸಿ ಮಾಡಿಕೊಳ್ಳಬಾರದು. ಅಂತಹ ವಿಷಯಗಳಿಂದ ಹೊಸ ದಾರಿಯನ್ನು ಕಂಡುಕೊಳ್ಳಬೇಕು ಎಂಬುದಕ್ಕೆ ಈ ವ್ಯಕ್ತಿ ಉದಾಹರಣೆ ನೋಡಿ.  ಟ್ರಾಫಿಕ್‌ ತನ್ನನ್ನು ಆರೋಗ್ಯವಂತನನ್ನಾಗಿ ಮಾಡಿದೆ ಎಂದು ಈ ವ್ಯಕ್ತಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ….

Read More

ಹೊಸ ರೂಲ್ಸ್​: ಮಲೆ ಮಹದೇಶ್ವರಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ಮಹತ್ವದ ಸೂಚನೆ – Kannada News | Chamarajanagar: Mahadeshwara Betta Bans Night Padyatra After Deadly Leopard Incident

ಚಾಮರಾಜನಗರ, ಜನವರಿ 23: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ಚಿರತೆ (Leopard) ದಾಳಿಗೆ ಭಕ್ತ (Devotees) ಪ್ರವೀಣ್ ಬಲಿ ಪ್ರಕರಣ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಪಾದಯಾತ್ರಿಗಳಿಗೆ ಹೊಸ ನಿಯಮ ಜಾರಿ ಮಾಡಿದೆ. ಇನ್ಮುಂದೆ ರಾತ್ರಿ ವೇಳೆ ಬೆಟ್ಟಕ್ಕೆ ಪಾದಯಾತ್ರೆಗೆ ನಿರ್ಬಂಧ ಹೇರಲಾಗಿದೆ. ಕಾಡುಪ್ರಾಣಿಗಳ ಕಾಟ ಹಿನ್ನೆಲೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪಾದಯಾತ್ರೆ ನಿರ್ಬಂಧಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಘಟನೆ ಹಿನ್ನೆಲೆ …

Read More

ಬಿ.ಕೆ. ಹರಿಪ್ರಸಾದ್​​ ಅಮಾನತಿಗೆ ಬಿಜೆಪಿ ಪಟ್ಟು: ರಣಾಂಗಣವಾದ ವಿಧಾನ ಪರಿಷತ್​ – Kannada News | Uproar in Council Over BJP–Congress Clash on BH Hariprasad Suspension Demand

ಬೆಂಗಳೂರು, ಜನವರಿ 23:  ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿದ ವಿಚಾರ ಸಂಬಂಧ ಬಿ.ಕೆ. ಹರಿಪ್ರಸಾದ್ ಅಮಾನತು ಆಗಬೇಕು ಎಂದು ಬಿಜೆಪಿ ಒತ್ತಾಯಿಸಿದ ಹಿನ್ನೆಲೆ ವಿಧಾನ ಪರಿಷತ್​​ ರಣಾಂಗಣವಾದ ಪ್ರಸಂಗ ನಡೆದಿದೆ. ರಾಜ್ಯಪಾಲರು ಬಂದಾಗ ‘ಕೈ’ ಸದಸ್ಯರ ಗೂಂಡಾ ವರ್ತನೆ ಸರಿಯಲ್ಲ. ಹೀಗಾಗಿ ಬಿ.ಕೆ. ಹರಿಪ್ರಸಾದ್ ಅಮಾನತು ಆಗಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ನೋಟಿಸ್​ ಕೊಟ್ಟಿಲ್ಲ, ಹಾಗಾಗಿ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಲು ಆಗಲ್ಲ ಎಂದ ಸಭಾಪತಿ ಹೊರಟ್ಟಿ ಹೇಳಿದ್ದರಿಂದ ಕಾಂಗ್ರೆಸ್​ಗೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು…

Read More

ವಿಜಯಪುರ ಗ್ರಾಮೀಣ ಪೊಲೀಸರ ಭರ್ಜರಿ ಬೇಟೆ: ವಿವಿಧ ಪ್ರಕರಣ ಭೇದಿಸಿ 14 ಮಂದಿ ಅರೆಸ್ಟ್​; 1.17 ಕೋಟಿ ಮೌಲ್ಯದ ವಸ್ತುಗಳು ಜಪ್ತಿ – Kannada News | Vijayapura Police Arrest 14 Accused in Various Cases, Seize Assets Worth 1.17 Crore

ಪೊಲೀಸರು ಜಪ್ತಿ ಮಾಡಿರುವ ವಸ್ತುಗಳು. ವಿಜಯಪುರ, ಜನವರಿ 23: ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ವಿಜಯಪುರ ಗ್ರಾಮೀಣ ಪೊಲೀಸರು ಅಂತರ್​​ ಜಿಲ್ಲೆ ಮತ್ತು ಅಂತಾರಾಜ್ಯ ಕಳ್ಳರು, ಖದೀಮರು ಸೇರಿ ಒಟ್ಟು 14 ಮಂದಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ ನಗದು, ಚಿನ್ನಾಭರಣ ಮತ್ತು ವಾಹನಗಳು ಸೇರಿ 1.17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಖಾಕಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜಪ್ತಿ ಮಾಡಿದ ಹಣ ಮತ್ತು ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಹಲವು ಪ್ರಕರಣ ಭೇದಿಸಿದ ಖಾಕಿ 2025ರ…

Read More

ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು – Kannada News | India’s traffic chokehold: Bengaluru ranks second; Pune fifth in global congestion index for 2025

ಬೆಂಗಳೂರು, (ಜನವರಿ 23): ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್‌ (Bengaluru Traffic ) ಬಗ್ಗೆ ಮಾತನಾಡುವುದು ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ವಿದೇಶದಲ್ಲಿಯೂ ಚರ್ಚೆಯಾಗುತ್ತಿದೆ. ಎಷ್ಟೇ ಯೋಜನೆ ಕೈಗೊಂಡರೂ ಸಹ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಟ್ರಾಫಿಕ್‌ ಕುಖ್ಯಾತಿ ಪಡೆದ ನಗರಗಳ ಪಟ್ಟಿಯ ಪೈಕಿಯಲ್ಲಿ ಬೆಂಗಳೂರು 2ನೇ ಸ್ಥಾನ ಪಡೆದಿದೆ. ಆ ಮೂಲಕ ಸಂಚಾರ ದಟ್ಟಣೆಯಲ್ಲಿ ಹೊಸ ದಾಖಲೆ ಬರೆದಿದೆ. ಈಗಾಗಲೇ ಟ್ರಾಫಿಕ್‌ಗೆ ಕುಖ್ಯಾತಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರು (Bengaluru), ಇತ್ತೀಚಿನ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ (TomTom Traffic…

Read More

ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ: DFO ಹೇಳಿದ್ದೇನು? – Kannada News | Chikmagalur: Illegal Resort Construction in Bhadra Tiger Reserve Buffer Zone Ignites Row

ಚಿಕ್ಕಮಗಳೂರು, ಜನವರಿ 23: ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ನಡೆಯುತ್ತಿರುವ ಆರೋಪ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನ ಪ್ರಭಾವಿ ಮುಖಂಡನೊಬ್ಬರು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದ ಸರ್ವೆ ನಂಬರ್ 58ರಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ಪ್ರದೇಶವನ್ನು 2011ರಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಎಂದು…

Read More

Landlord Movie Review: ಅಸಮಾನತೆ, ಅನ್ಯಾಯದ ಇತಿಹಾಸ ಕೆದಕಿದ ‘ಲ್ಯಾಂಡ್​ಲಾರ್ಡ್’ – Kannada News | Duniya Vijay starrer Landlord movie tells the story of oppression set in rural India

ನಿರ್ದೇಶಕ ಜಡೇಶ್ ಕೆ. ಹಂಪಿ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಆದ ‘ಕಾಟೇರ’ ಸಿನಿಮಾದ ಕಥೆ, ಚಿತ್ರಕಥೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಜೊತೆ ಜಡೇಶ್ ಕೈ ಜೋಡಿಸಿದ್ದರು. ಈಗ ಜಡೇಶ್ ಅವರ ನಿರ್ದೇಶನದಲ್ಲಿ ‘ಲ್ಯಾಂಡ್​ಲಾರ್ಡ್’ ಸಿನಿಮಾ (Landlord Movie) ಮೂಡಿಬಂದಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ (Vijay Kumar), ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ರಿತನ್ಯಾ ವಿಜಯ್, ಶಿಶಿರ್ ಬೈಕಾಡಿ, ಉಮಾಶ್ರೀ ಮುಂತಾದವರು ನಟಿಸಿದ್ದಾರೆ. ಕೆ.ವಿ. ಸತ್ಯಪ್ರಕಾಶ್ ಮತ್ತು…

Read More