ಬ್ಯಾನರ್ ಗಲಾಟೆಗಳ ಬೆನ್ನಲ್ಲೇ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಬ್ಯಾನರ್ ತೆರೆವು ಕಾರ್ಯ ಚುರುಕು – Kannada News | GBA Cracks Down on Illegal Banners Across Bengaluru After Ballari, Chikkaballapur Row
ಬೆಂಗಳೂರು, ಜನವರಿ 21: ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಬ್ಯಾನರ್ ಗಲಾಟೆಗಳ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳು ಬೆಂಗಳೂರಿನಾದ್ಯಂತ (Bangalore) ಅಕ್ರಮವಾಗಿ ಅಳವಡಿಸಿರುವ ಬ್ಯಾನರ್, ಫ್ಲೆಕ್ಸ್ಗಳ ತೆರೆವು ಕಾರ್ಯ ಚರುಕುಗೊಳಿಸಿದ್ದಾರೆ. ನಗರದಾದ್ಯಂತ ಸ್ಕೈವಾಕ್ ಮತ್ತು ಬಸ್ ಶೆಲ್ಟರ್‌ಗಳ ಸಮೀಪ ಅನಧಿಕೃತವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳನ್ನು ತೆಗೆದುಹಾಕಲಾಗಿದೆ. ಶಾಂತಿನಗರ ವಿಭಾಗದಲ್ಲಿ ಏಳು, ಸಿ.ವಿ. ರಾಮನ್ ನಗರದಲ್ಲಿ ಆರು, ಶಿವಾಜಿನಗರದಲ್ಲಿ ಹದಿಮೂರು, ಚಿಕ್ಕಪೇಟೆಯಲ್ಲಿ ಇಪ್ಪತ್ತೆರಡು ಹಾಗೂ ಗಾಂಧಿನಗರದಲ್ಲಿ ಮೂರು ಹೋರ್ಡಿಂಗ್ಸ್‌ಗಳನ್ನು ತೆರವು ಮಾಡಲಾಗಿದೆ. ಇದಲ್ಲದೆ, ಬೆಂಗಳೂರು…