ಹಾಲು ಕರೆಯುವ ಸ್ಪರ್ಧೆ: 20-25 ಲೀಟರ್ ಹಾಲು ಕೊಡುವ ಹಸುಗಳನ್ನ ನೋಡಿ ದಂಗಾದ ಜನ – Kannada News | Record Milk Yields: Devanahalli Hosts State Level Cow Competition and Calf Show
ಅದು ನಿತ್ಯ ಯುವಕರು ಆಟವಾಡುವ, ಹಿರಿಯರು ವಾಕಿಂಗ್ ಮಾಡುವ ಮೈದಾನ. ಆದರೆ ಆ ಮೈದಾನಕ್ಕೆ ಕಳೆದ ಮೂರು ದಿನಗಳಿಂದ ಜನರ ಬದಲಿಗೆ ಜಾನುವಾರುಗಳು ಎಂಟ್ರಿಕೊಟ್ಟಿವೆ. ಏಕೆಂದರೆ ರಾಜ್ಯ ಮಟ್ಟದ ಹೆಚ್ಚು ಹಾಲು ಕರೆಯುವ ಹಸುಗಳ ಸ್ಪರ್ಧೆ ನಡೆಯುತ್ತಿದೆ. ರಾಜ್ಯದ ವಿವಿಧ ಮೂಲೆಗಳಿಂದ ಬಂದ ಜಾನುವಾರುಗಳು ನೋಡುಗರನ್ನ ನಿಬ್ಬೆರಗಾಗುವಂತೆ ಮಾಡಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಗೋಪಾಲಕರ ಸಂಘದ ವತಿಯಿಂದ ಕಳೆದ ಮೂರು ದಿನಗಳಿಂದ ರಾಜ್ಯ ಮಟ್ಟದ ಹೆಚ್ಚು ಹಾಲು ಕರೆಯುವ ಹಸುಗಳ…