ಮುಸ್ಲಿಮರಿಗೂ ಸೇಫ್ ಅಲ್ಲ ಪಾಕಿಸ್ತಾನ; ಮಸೀದಿಯಲ್ಲೂ ಬಾಂಬ್ ದಾಳಿ ನಡೆದಿದ್ದೇಕೆ? – Kannada News | Islamabad mosque blast why shia Muslims targeted in pakistan
ನವದೆಹಲಿ, ಫೆಬ್ರವರಿ 6: ಪಾಕಿಸ್ತಾನದ ಇಸ್ಲಮಾಬಾದ್ನಲ್ಲಿ ಇಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 69 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಟೈಮ್ಸ್ ಆಫ್ ಇಸ್ಲಾಮಾಬಾದ್ ವರದಿಯ ಪ್ರಕಾರ, ಆತ್ಮಾಹುತಿ ಬಾಂಬರ್ ಬರುವುದನ್ನು ನೋಡಿದ ಕಾವಲುಗಾರರು ಆತನನ್ನು ಮಸೀದಿಯ ಪ್ರವೇಶದ್ವಾರದಲ್ಲಿ ತಡೆದಿದ್ದರು. ಸ್ಫೋಟದ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆ ಸ್ಥಳದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಈ ಸ್ಫೋಟದ ಸ್ವರೂಪವನ್ನು ತನಿಖೆ ಮಾಡುತ್ತಿದೆ. ಪಾಕಿಸ್ತಾನದಲ್ಲಿ (Pakistan) ಅಲ್ಪಸಂಖ್ಯಾತರಾಗಿರುವ…