ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆಯೇ? ಇಲ್ಲಿದೆ ತಜ್ಞರ ಮಾಹಿತಿ – Kannada News | Does Eating Late Increase Sugar Levels?
ಇಂದಿನ ಒತ್ತಡದ ಜೀವನ ಅನೇಕ ರೀತಿಯ ಬದಲಾವಣೆಗಳಿಗೆ ಕಾರಣವಾಗಿದೆ. ಕೆಲಸ, ಅತಿಯಾದ ಮೊಬೈಲ್ ಫೋನ್ಗಳ ಬಳಕೆ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಜನರ ಆಹಾರ ಪದ್ಧತಿಯಲ್ಲಿ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಅನೇಕರು ತಡವಾಗಿ ಊಟ ಮಾಡುವುದನ್ನು ರೂಢಿಸಿಕೊಂಡಿದ್ದು ಇದನ್ನು ಸಾಮಾನ್ಯ ಅಭ್ಯಾಸವೆಂದು ತಿಳಿದುಕೊಂಡಿದ್ದಾರೆ, ಆದರೆ ಇದರ ಪರಿಣಾಮ ತಕ್ಷಣವೇ ಗಮನಕ್ಕೆ ಬರದಿದ್ದರೂ ಕೂಡ ಕ್ರಮೇಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ತಡರಾತ್ರಿ ಅಥವಾ ತಡವಾಗಿ ಊಟವನ್ನು (Eating Late) ಮಾಡುವುದರಿಂದ ದೇಹದ ಸಮತೋಲನ ಹಾಳಾಗಬಹುದು ಮತ್ತು ರಕ್ತದಲ್ಲಿನ ಸಕ್ಕರೆ…