ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಅಮೆರಿಕ ದಾಳಿಗೆ ಇರಾನ್ ಪ್ರತೀಕಾರ – Kannada News
ಟೆಹ್ರಾನ್, ಜೂನ್ 11: ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ದೇಶವು ಜಾಗತಿಕವಾಗಿ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚುವುದಾಗಿ ಘೋಷಿಸಿದೆ. ಇರಾನ್‌ನ ಇಂಟರ್ನ್ಯಾಷನಲ್ ಸೆಂಟ್ರಲ್ ಕಮಾಂಡ್ ಅನ್ನು ಉಲ್ಲೇಖಿಸಿ ಅಲ್ಲಿನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ವರದಿ ಮಾಡಿದೆ. ಇಂದು ಬಿಡುಗಡೆಯಾದ ಖಾತಮ್ ಅಲ್-ಅನ್ಬಿಯಾ ಸೆಂಟ್ರಲ್ ಹೆಡ್‌ಕ್ವಾರ್ಟರ್ಸ್‌ನ ಅಧಿಕೃತ ಹೇಳಿಕೆಯನ್ನು ಪ್ರೆಸ್ ಟಿವಿ ಪ್ರಸಾರ ಮಾಡಿದೆ. ಈ ಆದೇಶದ ಪ್ರಕಾರ, ತೈಲ ಟ್ಯಾಂಕರ್‌ಗಳು…