ಆಸೀಸ್ ಲೆಜೆಂಡರಿ ವೇಗಿ ಬ್ರೆಟ್ ಲೀಗೆ ಹಾಲ್ ಆಫ್ ಫೇಮ್ ಗೌರವ
ಆಸ್ಟ್ರೇಲಿಯಾದ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಮತ್ತೊಬ್ಬ ಲೆಜೆಂಡರಿ ವೇಗಿಯ ಸೇರ್ಪಡೆಯಾಗಿದೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರಿಗೆ ಡಿಸೆಂಬರ್ 28, 2025 ರಂದು ಆಸ್ಟ್ರೇಲಿಯಾದ ಕ್ರಿಕೆಟ್ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ. ವಿಶ್ವದ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಬ್ರೆಟ್ ಲೀಗೆ ಅರ್ಹಗೌರವ ಸಂದಿದೆ. ಬ್ರೆಟ್ ಲೀ 1999 ರಿಂದ 2012 ರವರೆಗೆ ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ತಮ್ಮ ವೇಗದ ಮೂಲಕ ಪ್ರಪಂಚದಾದ್ಯಂತದ ಬ್ಯಾಟ್ಸ್‌ಮನ್‌ಗಳಲ್ಲಿ ಭಯ ಹುಟ್ಟಿಸಿದ ಬ್ರೆಟ್…