ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವಿದ್ಯಾರ್ಥಿ: ಪಾದಚಾರಿ ಸಾವು – Kannada News | Bengaluru Drunk Driver Kills Delivery Boy in Audi Crash
ಬೆಂಗಳೂರು, ಡಿಸೆಂಬರ್ 28: ವಿದ್ಯಾರ್ಥಿಯೋರ್ವ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಪರಿಣಾಮ ನಡೆದ ಅಪಘಾತದಲ್ಲಿ ಪಾದಚಾರಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನ 27ನೇ ಕ್ರಾಸ್ನಲ್ಲಿ ನಡೆದಿದೆ. ಡಿಸೆಂಬರ್ 22ರಂದು ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವೇಗವಾಗಿ ಬಂದ ಆಡಿ ಕಾರು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಬೆಳಗಾವಿ ಜಿಲ್ಲೆ ಬೈಲಹೊಂಗಲ ಮೂಲದ ಸಂತೋಷ್(26) ಅಸುನೀಗಿದ್ದಾರೆ. ಅಪಘಾತದ ರಭಸಕ್ಕೆ ರಸ್ತೆ ಬದಿ ನಿಂತಿದ್ದ ಕಾರುಗಳಿಗೂ ಡ್ಯಾಮೇಜ್ ಆಗಿದೆ. ಮೃತ ಯುವಕ ಬೆಂಗಳೂರಲ್ಲಿ ಡೆಲಿವರಿ ಬಾಯ್…