ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಕೃತ್ಯ; ನರ್ಸ್‌ಗಳು ಬಟ್ಟೆ ಬದಲಿಸುವ ವಿಡಿಯೋ ಮಾಡುತ್ತಿದ್ದ ಸೈಕೋ ಅಂದರ್! – Kannada News | Bengaluru Nurse Privacy Breach: Man Arrested for Secretly Filming Nurses
ನರ್ಸ್‌ಗಳ ಖಾಸಗಿ ವಿಡಿಯೋ ಮಾಡುತ್ತಿದ್ದ ಸೈಕೋ ಅಂದರ್! ಬೆಂಗಳೂರು, ಡಿಸೆಂಬರ್ 26: ಇತ್ತೀಚೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವ ಪ್ರಕರಣವೊಂದು ಸುದ್ದಿಯಾಗಿತ್ತು. ಇದೀಗ ಬೆಂಗಳೂರಿನ (Bengaluru) ಆಸ್ಪತ್ರೆಯೊಂದರಲ್ಲಿ ಸೈಕೋ ಸಿಬ್ಬಂದಿಯೊಬ್ಬ ಮಹಿಳಾ ನರ್ಸ್‌ಗಳ ಖಾಸಗಿ ವೀಡಿಯೋ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯ ಈ ಕೃತ್ಯವು ವೈದ್ಯರ ಗಮನಕ್ಕೆ ಬಂದ ನಂತರ ಪೊಲೀಸರಲ್ಲಿ ದೂರು ನೀಡಲಾಗಿದ್ದು, ಕಾಮುಕನನ್ನು ಬಂಧಿಸಲಾಗಿದೆ. ನರ್ಸ್‌ಗಳು ಬಟ್ಟೆ ಬದಲಿಸುವ ವೀಡಿಯೋ ಮಾಡುತ್ತಿದ್ದ! ನಗರದ ನಾಗರಬಾವಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ…