ತ್ರಿವೇಣಿ ಕಾದಂಬರಿ ಆಧಾರಿತ ‘ಸರಳ ಸುಬ್ಬರಾವ್’ ಸಿನಿಮಾ ಫೆ.20ಕ್ಕೆ ರಿಲೀಸ್
1971ರ ಕಾಲಘಟ್ಟದ ಸುಂದರ ಕೌಟುಂಬಿಕ ಕಥಾಹಂದರ ಹೊಂದಿರುವ ಸಿನಿಮಾ ‘ಸರಳ ಸುಬ್ಬರಾವ್’. ಇದು ಖ್ಯಾತ ಲೇಖಕಿ ತ್ರಿವೇಣಿ ಅವರ ಕಾದಂಬರಿ ಆಧರಿತ ಸಿನಿಮಾ ಎಂಬುದು ವಿಶೇಷ. ‘ಸರಳ ಸುಬ್ಬರಾವ್’ ಸಿನಿಮಾವನ್ನು ‘ರಿಯಾನ್ ಕ್ರಿಯೇಷನ್ಸ್’ ಲಾಂಛನದ ಮೂಲಕ ಲೋಹಿತ್ ನಂಜುಂಡಯ್ಯ ಅವರು ನಿರ್ಮಿಸಿದ್ದಾರೆ. ಮಂಜು ಸ್ವರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಜಯ್ ರಾವ್, ಮಿಶಾ ನಾರಂಗ್ ನಟಿಸಿರುವ ‘ಸರಳ ಸುಬ್ಬರಾವ್’ ಸಿನಿಮಾ ಫೆಬ್ರವರಿ 20ರಂದು ತೆರೆಗೆ ಬರುತ್ತಿದೆ. ಈಗಾಗಲೇ ಈ ಸಿನಿಮಾದ ಟೀಸರ್, ಟ್ರೇಲರ್ ಮತ್ತು…