ಗ್ರಹಚಾರ ಎಂದರೆ ಇದೇ ನೋಡಿ; ಸೋಫಾದಿಂದ ಏಳುವಾಗ ಆಕಸ್ಮಿಕವಾಗಿ ಗುಂಡು ಹಾರಿ ಎನ್ಆರ್ಐ ಸಾವು – Kannada News | NRI dies in Punjab as gun goes off while getting up from sofa cctv video viral
ಫಿರೋಜ್‌ಪುರ, ಡಿಸೆಂಬರ್ 31: ಪಂಜಾಬ್‌ನ ಫಿರೋಜ್‌ಪುರದಲ್ಲಿ ಸೋಫಾದಿಂದ ಎದ್ದೇಳುವಾಗ ಸೊಂಟದಲ್ಲಿ ತುಂಬಿದ್ದ ಲೋಡ್ ಮಾಡಿದ ಪಿಸ್ತೂಲ್ನಿಂದ ಗುಂಡು ಹಾರಿ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹರ್ಪಿಂದರ್ ಸಿಂಗ್ ಎಂಬ ವ್ಯಕ್ತಿ ಧನಿ ಸುಚಾ ಸಿಂಗ್ ಗ್ರಾಮದಲ್ಲಿ ಇತ್ತೀಚೆಗೆ ನೆಲೆಸಿದ್ದ ಅನಿವಾಸಿ ಭಾರತೀಯ. ಸೋಮವಾರ ಈ ಘಟನೆ ನಡೆದಿದೆ. ಮನೆಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ಸೆರೆಯಾಗಿದೆ. ಹರ್ಪಿಂದರ್ ಸಿಂಗ್ ಅವರು ತಮ್ಮ ಸಂಬಂಧಿಕರೊಂದಿಗೆ ಸೋಫಾದಲ್ಲಿ ಕುಳಿತಿದ್ದವರು ಎದ್ದು ನಿಂತಿದ್ದಾರೆ. ಆಗ ಆಕಸ್ಮಿಕವಾಗಿ ಪಿಸ್ತೂಲ್ ಸಿಡಿದು, ಗುಂಡು…